Thursday, August 18, 2022

Latest Posts

ಆನ್‍ಲೈನ್ ಮಾರುಕಟ್ಟೆಯಲ್ಲಿ ಭಾರೀ ಹೆಸರು ಮಾಡಿರುವ ಅಮೆಜಾನ್ ಸಂಸ್ಥೆಯಿಂದಲೂ ಬಂತು ಇಟ್ಟಿಗೆ?

ಸುಂಟಿಕೊಪ್ಪ: ವಿವಿಧ ಆನ್‍ಲೈನ್ ಮಾರಾಟ ಸಂಸ್ಥೆಗಳು ಗ್ರಾಹಕರು ಸಲ್ಲಿಸಿದ ಬೇಡಿಕೆಗೆ ಬದಲಾಗಿ ಇಟ್ಟಿಗೆ, ಮಣ್ಣು ಮತ್ತಿತರ ವಸ್ತುಗಳನ್ನು ನೀಡಿ ವಂಚಿಸುತ್ತಿರುವ ಪ್ರಕರಣಗಳು ಇನ್ನೂ ಹಸಿರಾಗಿರುವಾಗಲೇ ಆನ್‍ಲೈನ್ ಮಾರುಕಟ್ಟೆಯಲ್ಲಿ ಭಾರೀ ಹೆಸರು ಮಾಡಿರುವ ಅಮೆಜಾನ್ ಸಂಸ್ಥೆಯ ಹೆಸರಿನಲ್ಲೂ ವ್ಯಕ್ತಿಯೊಬ್ಬರಿಗೆ ಪಂಗನಾಮ ಹಾಕಿರುವ ಘಟನೆ ಶನಿವಾರ ನಡೆದಿದೆ.
ಇಲ್ಲಿನ ಆಸ್ಪತ್ರೆ ರಸ್ತೆಯಲ್ಲಿರುವ ಅಂಗಡಿಯೊಂದರ ಮಾಲಕ ಟಿ.ಆರ್.ಜೈದೇವ್ ಮೋಸ ಹೋದವರಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಮೆಜಾನ್ ಆನ್‍ಲೈನ್ ಕಂಪನಿಯು ಎಕ್ಷಾಸ್ಟ್ ಫ್ಯಾನ್‍ಗಳ ಆಫರ್ ನೀಡಿತ್ತು. ಈ ಆಫರ್ ಮನಗಂಡ ಟಿ.ಆರ್.ಜೈದೇವ್ ಅವರು ಆನ್‍ಲೈನ್ ಮೂಲಕ ಎರಡು ಫ್ಯಾನ್‍ಗಳ ಖರೀದಿಗೆ ನಿರ್ಧರಿಸಿ ಬುಕ್ಕಿಂಗ್ ಮಾಡಿದ್ದರು.
ಅದರಂತೆ ಶನಿವಾರ ಬೆಳಗ್ಗೆ ಅಮೆಜಾನ್ ಕಂಪನಿಯ ಸೇಲ್ಸ್‍ಮ್ಯಾನ್ ಪಾರ್ಸೆಲ್ ನೀಡಿ, 4500ರೂ. ಹಣ ಪಡೆದು ಹಿಂತಿರುಗಿದ್ದಾನೆ. ಆದರೆ ಪಾರ್ಸೆಲನ್ನು ಜೈದೇವ್ ಅವರು ಬಿಚ್ಚಿ ನೋಡಿದಾಗ ತಾನು ಆರ್ಡರ್ ಮಾಡಿದ ಎರಡು ಫ್ಯಾನ್‍ಗಳ ಬದಲಾಗಿ ನಾಲ್ಕು ಧರ್ಮಕೋಲ್ ಹಾಗೂ ಎರಡು ಕೆಂಪು ಇಟ್ಟಿಗೆಗಳು ಅದರಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಅಮೆಜಾನ್ ಕಂಪನಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಈ ಬಗ್ಗೆ ಗಮನಹರಿಸಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈದೇವ್ , ಇದು ಕಂಪನಿಯಿಂದ ಆದ ಮೋಸದಂತಿಲ್ಲ. ಪಾರ್ಸೆಲ್ ಬಂದ ಮಧ್ಯದಲ್ಲಿ ಇದನ್ನು ಯಾರೋ ಬದಲಾಯಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಅಮೆಜಾನ್ ಕಂಪನಿಗೆ ಸೇಲ್ಸ್‍ಮ್ಯಾನ್ ಆಗಿ ನೇಮಕಗೊಂಡು ಬೆಲೆಬಾಳುವ ವಸ್ತುಗಳನ್ನು ಕದ್ದು ಹಳೆಯ ವಸ್ತುಗಳನ್ನು ಗ್ತಾಹಕರಿಗೆ ನೀಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆದ ಕಂಪನಿ ಕಳೆದ ಒಂದು ತಿಂಗಳ ಹಿಂದೆ ಹಲವು ಯುವಕರ ಮೇಲೆ ಕೇಸು ದಾಖಲಿಸಿ ಅವರನ್ನು ಪೊಲೀಸರು ಬಂಧಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!