ವಿಶಿಷ್ಟ ಆನ್ ಲೈನ್ ಸೇವೆ ಆರಂಭಿಸಿದ ಕೆ.ಎಸ್. ಹೆಗ್ಡೆ ಆಸ್ಪತ್ರೆ

0
98

ದಕ್ಷಿಣ ಕನ್ನಡ: ಕೊರೋನಾ ಸೋಂಕನ್ನು ತಡೆಗಟ್ಟಲು ರಾಜ್ಯಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು, ಇಲ್ಲಿಯ ದೇರಳಕಟ್ಟೆಯ ಪ್ರತಿಷ್ಠಿತ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಟೆಲಿಮೆಡಿಸಿನ್ ಸೇವೆ ಇಂದಿನಿಂದ ಆರಂಭಗೊಂಡಿದೆ.

ನಗರದಲ್ಲಿ ಎಷ್ಟೋ ಸ್ಥಳಗಳಲ್ಲಿ ಔಷಧಿ ಮಳಿಗೆಗಳಲ್ಲಿ ಔಷಧಿ ಇಲ್ಲದೆ ಜನರು ಪರದಾಡುವಂತ ಸ್ಥಿತಿಯಾಗಿದೆ. ಆದ್ದರಿಂದ ಕೆ.ಎಸ್ ಹೆಗ್ಡೆ ಆಸ್ಪತ್ರೆ ವಿಶಿಷ್ಟ ರೀತಿಯಲ್ಲಿ ಜನರಿಗೆ ಆನ್ ಲೈನ್ ಮೂಲಕ ರೋಗಿಗಳಿಗೆ ಔಷಧಿ ನೀಡಲು ಪ್ರತಿ ನಿತ್ಯ ಪೂರ್ವಾಹ್ನ 10ರಿಂದ ಸಂಜೆ 6 ಗಂಟೆಯ ವರೆಗೂ ಈ ಸೇವೆ ನೀಡಲಾಗುತ್ತದೆ ಎಂದು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಯಾವುದೇ ತುರ್ತು ಸಮಯದಲ್ಲಿ ಕರೆ ಮಾಡಬಹುದಾದ ಸಂಖ್ಯೆಗಳು:

ಜನರಲ್ ಮೆಡಿಸಿನ್: 9880254489, 8951414798, 9886517329
ಪೀಡಿಯಾಟ್ರಿಕ್ಸ್: 9480047468, 9845226405
ಚರ್ಮರೋಗ ಚಿಕಿತ್ಸೆ: 9448824934
ಮನೋರೋಗ ಚಿಕಿತ್ಸೆ:  9845204136
ನ್ಯೂರೋಲಜಿ: 8105670273
ಶಸ್ತ್ರಚಿಕಿತ್ಸೆ: 9964244284
ಪ್ರಸೂತಿ ಮತ್ತು ಸ್ತ್ರೀರೋಗ: 9945330056
ENT: 9980162161
 ಮಕ್ಕಳ ಶಸ್ತ್ರಚಿಕಿತ್ಸೆ: 9625594408
ಕಣ್ಣಿನ ಚಿಕಿತ್ಸೆ: 9448501350.

ಯಾವುದೇ ಸಂದರ್ಭದಲ್ಲಿ ರೋಗಿಗಳ ಮಾಹಿತಿಯನ್ನು ವಾಟ್ಸಪ್ ಮೂಲಕ ಕಳುಹಿಸಬಹುದು. ಚಿಕಿತ್ಸೆಯ ವಿವರಗಳನ್ನು ವಾಟ್ಸಪ್ ನಲ್ಲಿ ಕಳಿಸುತ್ತಾರೆ. ಅಗತ್ಯ ಎನಿಸಿದರೆ ವೈದ್ಯರೆ ಕರೆ ಮಾಡಿ, ಹೆಚ್ಚಿನ ಮಾಹಿತಿಯನ್ನು ಸೂಚಿಸುತ್ತಾರೆ.

LEAVE A REPLY

Please enter your comment!
Please enter your name here