ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರುಚಿ ರುಚಿಯಾಗಿ ಆಮ್ಲೇಟ್ ಮಾಡೋದು ಹೇಗೆ ಗೊತ್ತಾ?
ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚರಿತ್ರ್ಯಾ ಹೇಳ್ಕೊಡ್ತಾರೆ ನೋಡಿ!
ಮಗಳು ಅಡುಗೆ ಮಾಡುತ್ತಿರುವ ಮುದ್ದಾದ ವಿಡಿಯೋವನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.
ಅಂದಹಾಗೆ ಚರಿತ್ರ್ಯಾ ಅಡುಗೆ ಮಾಡೋದು ಕಲಿತದ್ದು ಯೂಟ್ಯೂಬ್ನಿಂದ ಅಂತೆ. ಯೂಟ್ಯೂಬ್ ಅಡುಗೆ ಕಲಿತು ಅದನ್ನು ಮನೆ ಮಂದಿಗೆ ಬಡಿಸುತ್ತಿದ್ದಾಳೆ ಈ ಪುಟಾಣಿ.
ವಿಡಿಯೋ ಆರಂಭದಲ್ಲಿ ಮಗಳೇ ಏನು ಮಾಡುತ್ತಿದ್ದೀಯಾ? ಎಂದು ಕೇಳುತ್ತಾರೆ ಗಣೇಶ್, ಅದಕ್ಕೆ ಆಕೆ ಇಂಗ್ಲಿಷ್ನಲ್ಲಿ ವಿವರಣೆ ಕೊಡುತ್ತಾಳೆ. ಬಳಿಕ ಗಣೇಶ್ ಏನು ಮಾಡುತ್ತಿದ್ದೀಯಾ ಮಗಳೇ ಸರಿಯಾಗಿ ಹೇಳು ಎಂದು ಮತ್ತೆ ಕೇಳುತ್ತಾರೆ, ಆಗ ಮಗಳು ಅಚ್ಚ ಕನ್ನಡದಲ್ಲಿ ಅಮ್ಲೆಟ್ ಮಾಡುತ್ತಿರುವುದಾಗಿ ಹೇಳುತ್ತಾರೆ. ಇದೇ ವೇಳೆ ವಿಡಿಯೋದಲ್ಲಿ ಗಣೇಶ್ ಪುತ್ರ ಸಹ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಗಣೇಶ್ ಶೇರ್ ಮಾಡಿ, ’ಅಮ್ಲೆಟ್ ಮಾಡೋದು ಹೇಗೆ? ತುಂಬಾ ಸರಳ. ಯೂಟ್ಯೂಬ್ ಪ್ರಭಾವ’ ಎಂದು ಕಣ್ಣುಮಿಟುಕಿಸಿದ್ದಾರೆ!
ಆಮ್ಲೆಟ್ ಮಾಡೋದು ಹೇಗೆ ?
Very simple……
ಯುಟ್ಯೂಬ್ ಪ್ರಭಾವ…?#cherrytheberry #talent #girlpower pic.twitter.com/5MrJgDRozS— Ganesh (@Official_Ganesh) November 23, 2020