Wednesday, August 10, 2022

Latest Posts

ಆಯುಷ್ಮಾನ್ ಭಾರತ್ ತ್ವರಿತಗೊಳಿಸಲು ಸಕಾಲ: WHO

ವಿಶ್ವಸಂಸ್ಥೆ: ವಿಶ್ವಕ್ಕೆ ಅನೇಕ ರೀತಿಯ ಸವಾಲು ಒಡ್ಡಿರುವ ಕೊರೋನಾ ಬಿಕ್ಕಟ್ಟು, ಭಾರತದ ಪಾಲಿಗೆ ಅವಕಾಶವಾಗುವ ಸಾಧ್ಯತೆಯಿದ್ದು, ಆಯುಷ್ಮಾನ್ ಭಾರತ್ ಯೋಜನೆ ತ್ವರಿತಗೊಳಿಸಲು ಭಾರತಕ್ಕೆ ಇದು ಸೂಕ್ತ ಸಮಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ತಿಳಿಸಿದ್ದಾರೆ.

ಭಾರತದ ಕೊರೋನಾ ಪರಿಸ್ಥಿತಿ ಕುರಿತು ಮಾತನಾಡಿದ್ದು, ಕೊರೋನಾ ಸೋಂಕು ವಿಶ್ವಕ್ಕೆ ಆರ್ಥಿಕ, ಭೌಗೋಳಿಕ ಸೇರಿ ಇನ್ನಿತರ ಗಂಭೀರ ಸವಾಲುಗಳನ್ನು ಒಡ್ಡಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಬಿಕ್ಕಟ್ಟಿನ ನಡುವೆಯೂ ಅವಕಾಶ ಹುಡುಕುವುದು ಅಷ್ಟೇ ಮುಖ್ಯವಾಗಿದೆ. ಉದಾಹರಣೆಗೆ ಭಾರತ ಸರ್ಕಾರದ ಅತಿ ದೊಡ್ಡ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ತ್ವರಿತಗೊಳಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss