Wednesday, June 29, 2022

Latest Posts

ಆರಂಭವಾಗದ ಶಾಲೆ-ಕಾಲೇಜುಗಳು: ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ವಿದ್ಯಾರ್ಥಿಗಳು!

ಕೊಪ್ಪಳ: ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ – ಕಾಲೇಜುಗಳನ್ನು ಆರಂಭಿಸದ ಕಾರಣ ಕಲಿಯಬೇಕಾಗಿದ್ದ ಗ್ರಾಮೀಣ ಭಾಗದಲ್ಲಿನ ಮಕ್ಕಳು ಈಗ ಕೃಷಿ ಕೂಲಿ ಕಾಯಕದತ್ತ ಹೊರಳಿದ್ದಾರೆ.
ಎಲ್ಲವೂ ಸರಿಯಾಗಿದ್ದರೆ ಜೂನ್​​ನಲ್ಲಿಯೇ ಶಾಲಾ – ಕಾಲೇಜುಗಳು ಪ್ರಾರಂಭವಾಗಿ ಮಕ್ಕಳು ಕಲಿಕೆಯಲ್ಲಿ ನಿರತರಾಗಿರುತ್ತಿದ್ದರು‌. ಆದರೆ, ಕೊರೊನಾದಿಂದಾಗಿ ಜ್ಞಾನ ದೇಗುಲಗಳ ಬಾಗಿಲು ಇನ್ನೂ ಕೆಲವು ತಿಂಗಳು ತೆರೆಯುವುದೇ ಅನುಮಾನವಾಗಿದೆ.
ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ – ಕಾಲೇಜುಗಳ ಮಕ್ಕಳು ದುಡಿಮೆಯತ್ತ ಮುಖಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಯ ಕೂಲಿ‌ ಕೆಲಸಗಳತ್ತ ಗಮನ ಹರಿಸಿದ್ದಾರೆ. ಹೆಸರು ವಕ್ಕಲಿ ಸೇರಿದಂತೆ ಅನೇಕ ಕೆಲಸಗಳಿಗೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಹೋಗುತ್ತಿದ್ದಾರೆ.
ದಿನಕ್ಕೆ  150 ಕೂಲಿ ಹಣ ಸಿಗುತ್ತದೆ
ಶಾಲಾ-ಕಾಲೇಜುಗಳನ್ನು ತೆರೆಯದ ಕಾರಣ ಮನೆಯಲ್ಲಿ ಕುಳಿತು ಏನು ಮಾಡುವುದು ಎಂದು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ದಿನಕ್ಕೆ  150 ಕೂಲಿ ಹಣ ಸಿಗುತ್ತದೆ.‌ ಇದರಿಂದಾಗಿ ಮನೆಯವರಿಗೆ ನಮ್ಮಿಂದಲೂ ಸಹಾಯವಾದಂತಾಗುತ್ತದೆ. ಶಾಲಾ-ಕಾಲೇಜುಗಳು ಪ್ರಾರಂಭವಾದರೆ ಶಾಲೆಗೆ ಹೋಗುತ್ತೇವೆ. ಅಲ್ಲಿಯವರೆಗೂ ಹೊಲದ ಕೆಲಸಕ್ಕೆ ಹೋಗುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿನಿ ವಿಜಯಲಕ್ಷ್ಮಿ.
ನಮ್ಮ ಶಾಲೆಯ ಖರ್ಚಿಗೆ ಕೆಲಸ ಮಾಡುತ್ತಿದ್ದೇವೆ
ಶಾಲಾ – ಕಾಲೇಜುಗಳು ಆರಂಭವಾಗದ ಕಾರಣ ಏನು ಮಾಡಬೇಕರಿ.. ಕೊರೋನಾ ಬಂದು ಯಾರು ಏನು ಕೊಡದಂತೆ ಆಗಿದೆ ಈಗಾಗಿ ಅಂಗಡಿಕಾರರು ಕೂಡ ಯಾವುದೇ ಕಾರಣಕ್ಕೆ ಉದ್ರಿ ಕೇಳಬೇಡಿ ಎನ್ನುತ್ತಾರೆ. ಇದರಿಂದ ಮನೆಯಲ್ಲಿ ಕುಳಿತು ಮಾಡುವುದಾದರೂ ಏನರಿ.. ಕೂಲಿ ಕೆಲಸಕ್ಕಾದರೂ ಹೋದರೆ ನಾಲ್ಕು ರೂ. ಸಿಕ್ಕರೆ ಅದೇ ನಮ್ಮ ಶಾಲೆಯ ಖರ್ಚುಗಳು ಆಗುತ್ತದೆ ಎಂಬ ಕಾರಣಕ್ಕೆ ಕೆಲಸಕ್ಕೆ ಬಂದಿವಿ ಎಂದು ವಿದ್ಯಾರ್ಥಿ ಬಸವರಾಜ ಹೇಳಿದನು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss