Tuesday, August 9, 2022

Latest Posts

ಆರು ಬಾರಿ ಪರೀಕ್ಷೆ ನಡೆಸಿದರೂ ಪಾಸಿಟಿವ್: ಮಂಗಳೂರಿನಲ್ಲಿ ಇಬ್ಬರು ವೃದ್ಧರಲ್ಲಿ ಗುಣವಾಗದ ಕೊರೋನಾ

ಮಂಗಳೂರು: ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಗಳನ್ನು ೧೪ ದಿನದೊಳಗೆ ಮತ್ತೆ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದರೆ ಗುಣಮುಖರಾಗಿದ್ದಾರೆ ಎಂದು ಭಾವಿಸಿ, ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ.
ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ವೃದ್ಧರಿಗೆ ಆರು ಬಾರಿ ಗಂಟಲ ದ್ರವದ ಮಾದರಿಯ ಪರೀಕ್ಷೆ ನಡೆಸಿದರೂ ಪಾಸಿಟಿವ್ ಎಂದೇ ವರದಿ ಬರುತ್ತಿದೆ. ಇದರಿಂದಾಗಿ ಇವರಿಬ್ಬರೂ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಈ ಎರಡು ಪ್ರಕರಣಗಳು ಈಗ ವೈದ್ಯರಿಗೆ ಸವಾಲಾಗಿದೆ.
ವಂದೇ ಭಾರತ್ ಮಿಷನ್‌ನಡಿ ಮೇ ೧೨ರಂದು ಮೊದಲ ಅಂತಾರಾಷ್ಟ್ರೀಯ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ ೮೧ ವರ್ಷ ಮತ್ತು ೭೬ ವರ್ಷದ ವೃದ್ಧರಿಬ್ಬರು ಈ ಅಚ್ಚರಿಗೆ ಕಾರಣವಾಗಿದ್ದಾರೆ. ದುಬೈನಿಂದ ಆಗಮಿಸಿದ ಇವರನ್ನು ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ಬಂದ ಬಳಿಕ ಅವರಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಚ್ಚರಿಯ ಸಂಗತಿ ಎಂದರೆ, ಅವರು ಮೇಲ್ನೋಟಕ್ಕೆ ಗುಣಮುಖರಾದಂತೆ ಕಂಡುಬಂದರೂ ಪ್ರತಿ ಬಾರಿ ಗಂಟಲುದ್ರವದ ಸ್ಯಾಂಪಲ್ ಪರೀಕ್ಷೆ ವೇಳೆ ಪಾಸಿಟಿವ್ ಬರುತ್ತಿದೆ.ಮೇಲ್ನೋಟಕ್ಕೆ ಆರೋಗ್ಯವಂತರಾಗಿರುವ ಇವರ ಗಂಟಲುದ್ರವ ತಪಾಸಣೆ ಆರು ಬಾರಿ ಮಾಡಿದರೂ ಸೋಂಕು ಇದೆ ಎಂದು ಕಾಣಿಸಿಕೊಳ್ಳುತ್ತಿದೆ.
ಇನ್ನೊಬ್ಬರು ೭೬ ವರ್ಷದ ವೃದ್ಧರು ತಮ್ಮ ಪತ್ನಿಯೊಂದಿಗೆ ದುಬೈಯಲ್ಲಿರುವ ಪುತ್ರಿಯ ಮನೆಗೆ ತೆರಳಿದ್ದು, ಅಲ್ಲಿ ಅಳಿಯ ಹಾಗೂ ಪುತ್ರಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅವರು ಗುಣಮುಖರಾಗಿzರೆ. ಈ ವೃದ್ಧ ದಂಪತಿ ಮೇ ೧೮ರಂದು ಮಂಗಳೂರಿಗೆ ಆಗಮಿಸಿದ್ದರು. ಆದರೆ, ಕ್ವಾರೆಂಟೈನ್‌ನಲ್ಲಿದ್ದ ಅವರ ಪತ್ನಿ ನೆಗೆಟಿವ್ ಬಂದು ಮನೆ ಸೇರಿzರೆ. ಪಾಸಿಟಿವ್ ಬಂದಿರುವ ಈ ವೃದ್ಧರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ಆರು ಬಾರಿ ಕೋವಿಡ್ ಸೋಂಕು ತಪಾಸಣೆ ಮಾಡಿದಾಗಲೂ ಪಾಸಿಟಿವ್ ಕಾಣಿಸುತ್ತಿದೆ. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿರುವ ಇವರು ತೀವ್ರ ಒತ್ತಡಕ್ಕೆ ಒಳಗಾಗಿzರೆ. ಕುಟುಂಬಸ್ಥರಿಗೆ ಕರೆ ಮಾಡಿ ಒಂದು ಸಲ ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿಯೇ ಇದ್ದ ಇವರು ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ರೆ ಬಾರದೇ ಮಾತ್ರೆ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸೋಂಕು ನೆಗೆಟಿವ್ ಬಾರದೇ ಮನೆಗೆ ಕಳುಹಿಸಲಾಗದೇ ವೈದ್ಯರು ಅಸಹಾಯಕರಾಗಿzರೆ.
ಈ ವಿಚಿತ್ರ ಪ್ರಕರಣಕ್ಕೆ ಸಂಬಂಸಿ ಹೋಂ ಕ್ವಾರಂಟೈನ್ ಮಾಡಿ ಅಲ್ಲಿಯೇ ಚಿಕಿತ್ಸೆ ನೀಡಿದರೆ ಹೇಗೆ ಎಂಬ ಬಗ್ಗೆ ವೈದ್ಯರು ಆಲೋಚಿಸುತ್ತಿದ್ದಾರೆ. ಕೋವಿಡ್ ಪೂರ್ತಿ ಕಡಿಮೆಯಾಗಿ ನೆಗೆಟಿವ್ ಬಾರದೆ ಡಿಸ್ಚಾರ್ಜ್ ಮಾಡುವಂತಿಲ್ಲ. ಇಲ್ಲಿಯೇ ಇದ್ದರೂ ಕೋವಿಡ್ ನೆಗೆಟಿವ್ ಬರುತ್ತಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಪರ್ಯಾಯ ಚಿಕಿತ್ಸಾ ಕ್ರಮದ ಬಗ್ಗೆ ವೈದ್ಯರು ಚಿಂತನೆ ನಡೆಸುತ್ತಿದ್ದಾರೆ. ಇವರನ್ನು ಮನೆ ಅಥವಾ ಮನೆಯ
ವಾತಾವರಣದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿ ಗುಣಪಡಿಸುವತ್ತ ವೈದ್ಯರು ಆಲೋಚಿಸುತ್ತಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss