ನವದೆಹಲಿ: ಇಲ್ಲಿನ ದೆಹಲಿ ಜಾರಿ ನಿರ್ದೇಶನಾಲಯದ ಆರು ಮಂದಿ ಅಧಿಕಾರಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಜಾರಿ ನಿರ್ದೇಶನಾಲಯದ ಪ್ರಧಾನಕಚೇರಿಯನ್ನು ಸೀಲ್’ಡೌನ್ ಮಾಡಲಾಗಿದೆ.
ಅಲ್ಲದೆ ಈ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 10 ಮಂದಿ ಅಧಿಕಾರಿಗಳನ್ನು ಕೂಡ ಕ್ವಾರಂಟೈನ್ ಮಾಡಲಾಗಿದ್ದು, ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.