ಹಾವೇರಿ: ಆರೋಗ್ಯ ಇಲಾಖೆಯ ೭ ಜನ ಸಿಬ್ಬಂದಿ ಸೇರಿ ಕೊರೋನಾ ಸೋಂಕು ಜಿಲ್ಲೆಯಲ್ಲಿ ಬುಧವಾರ ೧೮೧ ಜನರಲ್ಲಿ ದೃಢಪಟ್ಟಿದ್ದು ಸೋಂಕಿನಿಂದ ೨೨೬ ಜನರು ಗುಣಮುಖರಾಗಿದ್ದರೆ ಇಬ್ಬರು ಮರಣವನ್ನು ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಇಂದು ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೨೪, ಹಾನಗಲ್ ೧೯, ಹಾವೇರಿ ೫೭, ಹಿರೇಕೆರೂರ ೪೦, ರಾಣೇಬೆನ್ನೂರ ೩೦, ಸವಣೂರ ೨, ಶಿಗ್ಗಾಂವ ೮ ಜಾಗೂ ಇತರೆ ಓ ಸೇರಿ ಒಟ್ಟು ೧೮೧ ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಈವರೆಗೆ ೫೮೬೬ ಜನರಲ್ಲಿ ಸೋಂಕು ಕಾಣಿಸಿಕೋಂಡಿದ್ದು, ಇವರಲ್ಲಿ ಇಂದಿನ ೨೨೬ ಸೇರಿ ೪೫೭೮ ಜನರು ಗುಣಮುಖರಾಗಿದ್ದಾರೆ, ಇಂದಿನ ಇಬ್ಬರು ಸೇರಿ ಒಟ್ಟು ೧೨೫ ಜನರು ಮರಣವನ್ನು ಹೊಂದಿದ್ದಾರೆ. ಹೋಂಐಸೋಲೇಷನ್ ೬೭೮ ಹಾಗೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ೪೮೫ ಜನರು ಸೇರಿ ಒಟ್ಟು ೧೧೬೩ ಜನರಲ್ಲಿ ಕೊರೋನಾ ಸೋಂಕು ಸಕ್ರೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.