Thursday, March 4, 2021

Latest Posts

ಆರೋಗ್ಯ ಇಲಾಖೆ ಸರ್ವಜನಿಕರ ನಡುವೆ ಮಾಧ್ಯಮಗಳು ಜ್ಞಾನದ ಸೇತುವೆ: ಡಾ. ಪ್ರಸನ್ನ ಕುಮಾರ್

ಹೊಸದಿಗಂತ ವರದಿ,ರಾಮನಗರ:

ಆರೋಗ್ಯ ಇಲಾಖೆಯಲ್ಲಿ ಜನರ ಆರೋಗ್ಯ ಕಪಾಡಲು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತದೆ. ಇದನ್ನು ಅನುಷ್ಠಾನಗೊಳಿಸಲು ಜನರಿಗೆ ಬೇಕಿರುವ ಅರಿವು ಹಾಗೂ ಜ್ಞಾನವನ್ನು ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಸನ್ನ ಕುಮಾರ್ ಎನ್ ಅವರು ತಿಳಿಸಿದರು.

ಅವರು ಜಿಲ್ಲಾ ಆರೋಗ್ಯ ಇಲಾಖೆ ತರಬೇತಿ ಸಂಸ್ಥೆಯಲ್ಲಿ ಎನ್.ವಿ.ಬಿ.ಡಿ.ಸಿ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ಮಿತ್ರರಿಗೆ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶ 2014 ಕ್ಕೆ ಪೋಲೀಯೋ ಮುಕ್ತವಾಗಿದೆ ಹಾಗೂ 2025ಕ್ಕೆ ಮಲೇರಿಯಾ ಮುಕ್ತವಾಗಲು ಪ್ರಯತ್ನಿಸಲಾಗುತ್ತಿದೆ. ರೋಗ ಮುಕ್ತಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ಜನರಿಗೆ ರೋಗಗಳ ಲಕ್ಷಣ, ಮುಂಜಾಗ್ರತಾ ಕ್ರಮಗಳು, ಸಾರ್ವಜನಿಕರಿಗೆ ತಿಳಿಸಿ ಆರೋಗ್ಯ ಇಲಾಖೆಯೊಂದಿಗೆ ಮಾಧ್ಯಮಗಳು ಸದಾ ಕೆಲಸ ಮಾಡುತ್ತಿದೆ ಎಂದರು.

2020 ನೇ ಸಾಲಿನಲ್ಲಿ ರಾಮನಗರ ಜಿಲ್ಲೆಯಲ್ಲಿ ಮಲೇರಿಯಾ-3, ಫೈಲೇರಿಯಾ-21, ಡೆಂಗ್ಯೂ-14, ಚಿಕೂನ್ ಗುನ್ಯ- 37 ಪ್ರಕರಣಗಳು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮಾಧ್ಯಮದವರು ಪ್ರಚಾರ ಕಾರ್ಯಗಳಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಕೀಟ ಶಾಸ್ತ್ರ ತಜ್ಞೆ ಮಂಜುಶ್ರೀ ಅವರು ಮಾತನಾಡಿ ಡೆಂಗಿ ಮತ್ತು ಚಿಕುಂಗುನ್ಯಾ ಈಡೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಚಿಕುಂಗುನ್ಯಾ ಮಾರಣಾಂತಿಕವಲ್ಲ. ಡೆಂಗಿ ಅಘಾತಕಾರಿ ಜ್ವರವಾಗಿದ್ದು ಕೆಲವು ಸಂದರ್ಭದಲ್ಲಿ ಮಾರಣಾಂತಿಕವಾಗಬಹುದು. ಸೊಳ್ಳೆಗಳನ್ನು ನಿಯಂತ್ರಿಸುವ ಮುನ್ನಚ್ಚರಿಕಾ ಕ್ರಮ ಕೈಗೊಳ್ಳುವುದರಿಂದ  ರೋಗವನ್ನು ತಡೆಗಟ್ಟಬಹುದು ಎಂದರು.

ಸೊಳ್ಳೆ ನಿಯಂತ್ರಿಸುವ ಕ್ರಮಗಳ ಬಗ್ಗೆ ವಿವರಿಸಿದರು‌ ಆರೋಗ್ಯ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿದಾಗ ಜನ ಸಮಾನ್ಯರು ನಿಖರ ಮಾಹಿತಿ ನೀಡಿ ಸಹಕರಿಸಬೇಕು ಎಂದರು‌.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್., ಆರೋಗ್ಯ ಇಲಾಖೆ ಸಿಬ್ಬಂದಿ ವಿನಯ್ ಕುಮಾರ್ ಬಿ, ಸಿದ್ದರಾಮಯ್ಯ ಸಿ ಮತ್ತು ರಾಜೇಂದ್ರ ಎಚ್.ಸಿ. ಉಪಸ್ಥಿತರಿದ್ದರು

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!