ಹೊಸದಿಗಂತ ಆನ್ಲೈನ್ ಡೆಸ್ಕ್:
ಆರ್ಥಿಕ ಬೆಳವಣಿಗೆ ಮತ್ತು ಬೇಡಿಕೆ ಹೆಚ್ಚಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಹೊಸ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದು, ಕೆಲವು ಒತ್ತಡದ ವಲಯಗಳ ಬಗ್ಗೆ ಗಮನ ಹರಿಸಲಾಗುತ್ತದೆ ಎಂದರು.
ಜೊತೆಗೆ ಮಧ್ಯಮ ಆದಾಯದ ಗುಂಪುಗಳು,ಎಂಎಸ್ಎಂಇಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು. ಆರ್ಥಿಕ ಚೇತರಿಕೆಯ ಬಲವಾದ ಚಿಹ್ನೆಗಳು ಗೋಚರಿಸುತ್ತಿದೆ ಎಂದಿದ್ದಾರೆ. ಹೊಸ ಕ್ರಮಗಳು ಹೆಚ್ಚಾಗಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಸೇರಿದಂತೆ ವಿವಿಧ ಹೊಸ ಯೋಜನೆಗಳ ಮೂಲಕ ಬೇಡಿಕೆಯನ್ನು ಉತ್ಪಾದಿಸುವತ್ತ ಗಮನ ಹರಿಸುತ್ತವೆ. ವಾಯುಯಾನ, ಆತಿಥ್ಯ ಮತ್ತು ಸೇವೆಗಳಂತಹ ಒತ್ತಡದ ಕ್ಷೇತ್ರಗಳಿಗೆ ಸಹಾಯ ಮಾಡುವಂತಹ ಕ್ರಮಗಳನ್ನು ಸರ್ಕಾರ ಪ್ರಕಟಿಸುವ ನಿರೀಕ್ಷೆಯಿದೆ.