Wednesday, June 29, 2022

Latest Posts

ಆರ್ಥಿಕ ಸುಧಾರಣೆಗೆ ಬಿಗಿಸೂತ್ರ | ಬ್ಯಾಂಕ್ ಉನ್ನತಾಧಿಕಾರಿಗಳ ಜೊತೆ ಆರ್‌ಬಿಐ ಗವರ್ನರ್ ಚರ್ಚೆ

ಹೊಸದಿಲ್ಲಿ: ಲಾಕ್‌ಡೌನ್‌ನಂತರದ ದೇಶದ ಆರ್ಥಿಕ ಸುಧಾರಣೆ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್‌ದಾಸ್,ಸಾರ್ವತ್ರಿಕ ಹಾಗೂ ಖಾಸಗಿ ಬ್ಯಾಂಕ್ ಪ್ರಮುಖ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶನಿವಾರದಂದು , ಕೇಂದ್ರ ಸಂಪುಟದ ಕೆಲ ಸಚಿವರ ಜೊತೆ ಮಾತುಕತೆ ನಡೆಸಿದ ಬೆನ್ನಹಿಂದೆಯೇ ಆರ್‌ಬಿಐ ಗವರ್ನರ್, ದೇಶದ ಬ್ಯಾಂಕ್ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿರುವುದು ಗಮನಾರ್ಹ ಸಂಗತಿಯಾಗಿದೆ.
ಕೊರೋನಾ ಸೋಂಕು ನಿವಾರಣೆಯ ಜೊತೆಗೆ ಕೇಂದ್ರ ಸರ್ಕಾರ ದೇಶದ ಆರ್ಥಿಕ ಚಟುವಟಿಕೆಗಳ ಕಡೆಯೂ ಗಮನಹರಿಸಿದ್ದು ಈ ದಿಶೆಯಲ್ಲಿ ಸಾರ್ವತ್ರಿಕ ಹಾಗೂ ಖಾಸಗಿ ಬ್ಯಾಂಕ್ ವಲಯ ವಹಿಸಬೇಕಿರುವ ಪ್ರಮುಖ ಪಾತ್ರದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಸಣ್ಣ ಅತಿ ಸಣ್ಣ ಕೈಗಾರಿಕಾ ಉದ್ದಿಮೆಗಳಿಗೆ ಅಗತ್ಯವಿರುವ ಬ್ಯಾಂಕಿಂಗ್ ನೆರವು ಮತ್ತು ಸಾಲದ ಸವಲತ್ತು, ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅಗತ್ಯವಿರುವ ಹಣಕಾಸು, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಯುವಕ, ಯುವತಿಯರ ಸ್ವಯಂ ಉದ್ಯೋಗಕ್ಕೆ ಅಗತ್ಯವಿರುವ ಆರ್ಥಿಕ ನೆರವು, ಚಿನಿವಾರ, ಕಮ್ಮಾರ, ಬಡಗಿ, ನೇಕಾರ ಎಲೆಕ್ಟ್ರಿಷಿಯನ್, ಪೇಯಿಂಟರ್, ಮೋಟರ್ ಮೆಕಾನಿಕ್ ಮೊದಲಾದ ವೃತ್ತಿಗಳಲ್ಲಿ ತೊಡಗಿರುವ ಸಮುದಾಯಗಳಿಗೆ ಬ್ಯಾಂಕುಗಳಿಂದ ಲಭ್ಯವಾಗಬೇಕಿರುವ ಠೇವಣಿ, ನಗದು ಹಾಗೂ ಡಿಜಿಟಲ್ ವಹಿವಾಟಿನ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss