Tuesday, June 28, 2022

Latest Posts

ಆರ್ಯವೈಶ್ಯ ಸಂಘದಿಂದ ಮಂಜಮ್ಮ ಜೋಗತಿ ಅವರಿಗೆ ಸನ್ಮಾನ

ಹೊಸದಿಗಂತ ವರದಿ, ಬಳ್ಳಾರಿ:

ನಗರದ ಬಲಿಜ ಮಂಗಲ ಭವನದಲ್ಲಿ ಆರ್ಯ ವೈಶ್ಯ ಅಸೋಸಿಯೇಶನ್ ಆಶ್ರಯದಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಮತ್ತು ಇತರೆ ಕೊರೋನಾ ವಾರಿಯರ್ಸ್ ಗಳಾದ ಡಾ. ಬಸರೆಡ್ಡಿ, ಡಾ. ಉಮಾಶಂಕರ್, ಡಾ. ಹರೀಶ್, ಸುಬ್ರಮಣ್ಯಂ.ಪಿ, ರಾಮಕೃಷ್ಣ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಂಜಮ್ಮ ಜೋಗತಿ ಅವರು ಮಾತನಾಡಿ, ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಈ ಮಟ್ಟಕ್ಕೆ ಬೆಳದು ಬಂದಿರುವೆ, ನಾನು ಈ ಮಟ್ಟಕ್ಕೆ ಮೇಲೆ‌ಬರಲು ನನ್ನ ಈ ಕಲೆಯೇ ಪ್ರಮುಖ ಕಾರಣವಾಗಿದೆ. ನಮ್ಮನ್ನು ಈ ಮಟ್ಟಕ್ಕೆ , ಪತ್ರಕರ್ತ ಮಿತ್ರರು ಹೆಚ್ಚಿನ ಪ್ರಚಾರ ನೀಡಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾಗಿದ್ದಾರೆ, ಅವರೆಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಅಭಿಪ್ರಾಯಪಟ್ಟರು.

ಸಂಘದ ಪದಾಧಿಕಾರಿಗಳಾದ ರಮೇಶ್ ಗೋಪಾಲ್ ಮಾತನಾಡಿದರು. ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರು ತಮ್ಮ ಕಲೆಯನ್ನು ಪ್ರದರ್ಶಿಸುವ‌ ರಾಜ್ಯವಷ್ಟೇ ಅಲ್ಲ, ಇಡೀ ವಿಶ್ವದ ಗಮನಸೆಳೆದಿದ್ದಾರೆ. ಈ ಅವರ ಸಾಧನೆ ಜಿಲ್ಲೆಯ ಹಾಗೂ ಸಮುದಾಯದ ಕೀರ್ತಿ ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೌಂತ ಗಿರಿ, ಮುತ್ಯಲಾ ರಮೇಶ್ ಬಾಬು, ಶ್ರೀಧರ್ ಸೇರಿದಂತೆ ಆರ್ಯ ವೈಶ್ಯ ಸಮುದಾಯದ ವಿವಿಧ ಗಣ್ಯರು, ಮುಖಂಡರು, ಇತರರ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮಂಜಮ್ಮ ಜೋಗತಿ ಅವರ ಜೊತೆಗೆ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನಿಸಿ ಗೌರವಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss