ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್ಬಿಐ) ಇನ್ನೋವೇಶನ್ ಹಬ್ನ ಮೊದಲ ಅಧ್ಯಕ್ಷರಾಗಿ ಇನ್ಫೊಸಿಸ್ ಸಹ ಸಂಸ್ಥಾಪಕ, ಮಾಜಿ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ.
ಆರ್ಥಿಕ ವಲಯದಲ್ಲಿ ಆವಿಷ್ಕಾರವನ್ನು ಪ್ರಚುರ ಪಡಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರವು ಕಳೆದ ಆಗಸ್ಟ್ ನಲ್ಲಿ ಘೋಷಣೆ ಮಾಡಿತ್ತು. ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು ವಲಯದಲ್ಲಿ ಹೊಸತನವನ್ನು ತರುವುದು ಈ ಕೇಂದ್ರದ ಉದ್ದೇಶವಾಗಿದೆ.
ರಿಸರ್ವ್ ಬ್ಯಾಂಕ್, ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಹ-ಅಧ್ಯಕ್ಷರಾದ ಸೇನಾಪತಿ(ಕ್ರಿಸ್) ಗೋಪಾಲಕೃಷ್ಣನ್ ಅವರನ್ನು ಆರ್ ಬಿಐ ಇನ್ನೋವೇಶನ್ ಹಬ್ನ ಮೊದಲ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಆರ್ ಬಿಐ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹಣಕಾಸು ವಲಯದ ಆವಿಷ್ಕಾರ ಹಾಗೂ ಆಲೋಚನೆಗಳ ವಿನಿಮಯ ಮತ್ತು ಅಭಿವೃದ್ಧಿಗೆ ಸಮನ್ವಯ ಮಾಡಲಿದೆ. ಹಣಕಾಸು ತಂತ್ರಜ್ಞಾನ ಸಂಶೋಧನೆಗೆ ಉತ್ತೇಜನ ಹಾಗೂ ಆಂತರಿಕ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ತೊಡಗಿರುವ ಸ್ಟಾರ್ಟ್ ಅಪ್ ಗಳಿಗೆ ಮತ್ತು ಆವಿಷ್ಕಾರ ನಡೆಸುವುದಕ್ಕೆಹಬ್ ಸಹಾಯ ಮಾಡುತ್ತದೆ.