Sunday, June 26, 2022

Latest Posts

ಆರ್. ಆರ್. ನಗರ ಎಲೆಕ್ಷನ್: ಮತಗಟ್ಟೆ ಬಳಿ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಮಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಮತಗಟ್ಟೆ ಬಳಿ ಪಕ್ಷಗಳ  ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆದಿದೆ.

ಮತದಾರರರಿಗೆ ಸ್ಲಿಪ್ ನೀಡಲು ರಾಜಕೀಯ ಪಕ್ಷಗಳು ಮತಗಟ್ಟೆ ಬಳಿ ಟೇಬಲ್ ಹಾಕುತ್ತಿದ್ದವು. ಈ ಸಮಯದಲ್ಲಿ  ಆರ್. ಆರ್. ನಗರ ವ್ಯಾಪ್ತಿಯ ಕ್ಲಾರೆಂಟ್ ಶಾಲೆ ಮತಗಟ್ಟೆ ಸಮೀಪ ಟೇಬಲ್ ಹಾಕುವ ವಿಚಾರಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಯಾವುದೇ ಅಹಿತಕರ ಘಟನೆ ನಡೆಯಾದಂತೆ ಪೊಲೀಸರು ಕಣ್ಗಾವಲಿರಿಸಿದ್ದು, ಮತದಾರರು ನಿರಾತಂಕವಾಗಿ ಮತ ಚಲಾಯಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss