Thursday, August 11, 2022

Latest Posts

ಆರ್.ಎಸ್.ಎಸ್. ಶಿಸ್ತು, ರಾಷ್ಟ್ರ ಭಕ್ತಿ ಎಲ್ಲರೂ ಬೆಳೆಸಿಕೊಂಡರೆ ದೇಶ ಬಲಿಷ್ಠ: ಅಯ್ಯಣ್ಣ ಹುಂಡೇಕಾರ್

ಯಾದಗಿರಿ: ಮಹಾಮಾರಿ ಕೊರೋನಾ ಜೊತೆಯಲ್ಲಿಯೇ ಹೊಂದಿಕೊಂಡು ಬಾಳುವ ಸಂಕಷ್ಟ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್.) ದ ಸ್ವಯಂ ಸೇವಕರು ನಗರದ ಪ್ರತಿ ಕುಟುಂಬಕ್ಕೂ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಹಾಗೂ ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಸ್ವರ‍್ಥ ಕರ‍್ಯ ನಮ್ಮೆಲ್ಲರಿಗೆ ಮಾದರಿ ಎಂದು ಹಿರಿಯ ಪತ್ರರ‍್ತ, ಸಾಹಿತಿ ಅಯ್ಯಣ್ಣ ಹುಂಡೇಕಾರ್ ಅಭಿಪ್ರಾಯಪಟ್ಟರು.
ಅವರು ನಗರದ ಹಿಂದಿ ಪ್ರಚಾರ ಸಭಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧವ ಶಾಖೆಯ ವತಿಯಿಂದ ವಿತರಿಸಲಾದ ಮುಖ ಪರದೆ (ಮಾಸ್ಕ್) ಮತ್ತು ಪೌಷ್ಟಿಕತೆ ಹೆಚ್ಚಿಸುವ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಸ್ವಯಂ ಸೇವಕರು ಉಚಿತವಾಗಿ ವಿತರಣೆ ಮಾಡುತ್ತಿರುವುದು ದೇಶಕ್ಕೆ ಮಾದರಿಯಾಗಿದೆ. ಆರ್.ಎಸ್.ಎಸ್. ಸಂಸ್ಥೆಯಂತೆ ಎಲ್ಲ ಸಂಘಟನೆಗಳು ಇದೇ ರೀತಿ ದೇಶಪ್ರೇಮದ ಕೆಲಸಗಳನ್ನು ಮಾಡಿದಲ್ಲಿ ದೇಶ ಬಲಿಷ್ಠವಾಗಲಿದೆ ಆದರೆ ಇನ್ನುಳಿದವರು ಈ ಮರ‍್ಗದಲ್ಲಿ ಬರುವುದಕ್ಕೆ ಇನ್ನು ಮಾನಸಿಕವಾಗಿ ಸಿದ್ದರಾಗಿಲ್ಲದಿರುವುದು ದೇಶಕ್ಕೆ ಆಗುತ್ತಿರುವ ಹಿನ್ನಡೆ ಎಂದು ವಿಶ್ಲೇಷಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿ ಮಾತ ನಾಡಿ ಸ್ವಯಂ ಸೇವಕರಲ್ಲಿರುವ ಶಿಸ್ತು ಮತ್ತು ರಾಷ್ಟç ಭಕ್ತಿ ಅಮೋಘವಾದದ್ದು ಎಂದು ಕೊಂಡಾಡಿದರು. ಎಲ್ಲರೂ ಆರ್.ಎಸ್.ಎಸ್. ಅನ್ನು ಅನುಸರಿಸಿದರೆ ಸಾಕು ದೇಶದ ಶಕ್ತಿ ತಾನಾಗಿಯೇ ವೃದ್ದಿಸುತ್ತದೆ ಎಂದು ಹೇಳಿದರು.
ನಗರದ ಎಲ್ಲ ಭಾಗಗಳಲ್ಲಿ ಮುಖಪರದೆ ಹಾಗು ಪೌಷ್ಟಿಕ ಮಾತ್ರೆಗಳು ವಿತರಿಸಲಾಗುವುದು ಎಂದು ಆರ್.ಎಸ್.ಎಸ್. ಮುಖಂಡರು ಸಭೆಗೆ ತಿಳಿಸಿದರು.
ಸಾಹಿತ್ಯ ಪರಿಷತ್ ಪ್ರಮುಖರಾದ ನಾಗೇಂದ್ರ ಜಾಜಿ, ಮಲ್ಲಪ್ಪ ಹಳ್ಳಿಕಟ್ಟಿ ಇನ್ನಿತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss