Saturday, June 25, 2022

Latest Posts

ಆರ್.ಬಿ.ಐ ನ ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಯಥಾಸ್ಥಿತಿ: ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್

ಹೊಸದಿಲ್ಲಿ: ದೇಶಾದ್ಯಂತ ಲಾಕ್‌ಡೌನ್ ಅನ್ನು ಕ್ರಮೇಣ ಸಡಿಲಗೊಳಿಸುತ್ತಿರುವ ನಡುವೆ ಆರ್ ಬಿಐ ನ ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಯಥಾಸ್ಥಿತಿಯಲ್ಲಿರಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ರೆಪೋ ದರ ಶೇ.4 ಹಾಗೂ ರಿವರ್ಸ್ ದರ  ಶೇ.3.35ರಷ್ಟೇ ಇರಲಿದ್ದು, ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೊಸದಾಗಿ ರಚಿಸಲಾದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ತನ್ನ ಮೂರು ದಿನಗಳ ಸಭೆಯನ್ನು ಅಕ್ಟೋಬರ್ 7 ರಂದು ಪ್ರಾರಂಭಿಸಿದ್ದು, ಇಂದು ಮೊದಲ ಸಭೆ ನಡೆಸಿದೆ.

ಪಾಲಿಸಿ ರೆಪೊ ದರವು ಶೇ.4ರಷ್ಎ ಬದಲಾಗದೆ ಉಳಿಸಿದೆ ಮತ್ತು ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು, ಕೊರೋನಾದ ಪರಿಣಾಮ ತಗ್ಗಿಸಿ ಅಗತ್ಯವಿರುವವರೆಗೂ ವಿತ್ತೀಯ ನೀತಿಯ ಅನುಕೂಲಕರ ನಿಲುವನ್ನು ಮುಂದುವರಿಸಲು ಎಂಪಿಸಿ ಸರ್ವಾನುಮತದಿಂದ ಮತ ಚಲಾಯಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss