Thursday, August 18, 2022

Latest Posts

ಆಲಿಯಾ ‘ಭಟ್- ಮಹೇಶ್ ‘ಭಟ್ ಸಿನಿಮಾ ಬಹಿಷ್ಕಾರಿಸುವಂತೆ ಒತ್ತಾಯ…! ಯಾಕೆ ಗೊತ್ತಾ ? ಇಲ್ಲಿದೆ ಸಂಪೂರ್ಣ ವರದಿ

ಬಾಲಿವುಡ್‌ನಲ್ಲಿ   ನಟ  ಸುಶಾಂತ್  ಸಿಂಗ್  ರಜಪೂತ್  ಸಾವಿನ  ನಂತರ  ತುಂಬಾ  ಬೆಳವಣಿಗೆ  ಕಂಡು  ಬಂದಿದೆ.  ಕೆಲವರು  ದೊಡ್ಡ  ಸ್ಟಾರ್  ಎಂಬ  ಪಟ್ಟವನ್ನು  ಕಳೆದುಕೊಂಡಿದ್ದಾರೆ.  ಇನ್ನು  ಆಗೊಮ್ಮೆ-ಈಗೊಮ್ಮೆ  ಕೇಳಿಬರುತ್ತಿದ್ದ  ಸ್ವಜನಪಕ್ಷಪಾತದ  ವಿರುದ್ಧ  ‘ಧ್ವನಿ  ಸುಶಾಂತ್  ಸಿಂಗ್  ಸಾವಿನ  ನಂತರ  ಕೇಳಿಬರುತ್ತಿದೆ.  ಸ್ವಜನಪಕ್ಷಪಾತದಿಂದಲೇ ಚಿತ್ರರಂಗಕ್ಕೆ ಬಂದು ಸ್ಟಾರ್ ಆದ, ಆಗುತ್ತಿರುವ ನಟ-ನಟಿಯರು ಹಿಂದೆಂದೂ ಎದುರಿಸದ ಅಭದ್ರತೆ ಎದುರಿಸುತ್ತಿದ್ದು. ’ನೆಪೊಟಿಸಮ್ ಸ್ಟಾರ್’ ಗಳ ಸಿನಿಮಾಗಳು ಅಡಕತ್ತರಿಯಲ್ಲಿ ಸಿಲುಕಿವೆ. ಸುಶಾಂತ್ ಸಿಂಗ್ ಪ್ರಕರಣದ ಅನುಮಾನಿತರಲ್ಲಿ ಒಬ್ಬರಾದ ಮಹೇಶ್ ‘ಭಟ್ ನಿರ್ದೇಶನದ, ಆಲಿಯಾ ‘ಭಟ್ ಅಭಿನಯದ ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ. ಆಲಿಯಾ ‘ಭಟ್, ಆದಿತ್ಯ ರಾಯ್ ಕಪೂರ್, ಸಂಜಯ್ ದತ್, ಪೂಜಾ ‘ಭಟ್ ನಟನೆಯ ಸಡಕ್ ೨ ಸಿನಿಮಾ ಕೆಲವೇ ದಿನಗಳಲ್ಲಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಲಾಗಿದೆ. ಐಎಂಬಿಡಿ ರೇಟಿಂಗ್ಸ್  ತಗ್ಗಿಸುವಂತೆ ಸಹ ಕರೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!