ಬಾಗಲಕೋಟೆ : ಕೊರೋನಾ ಸೋಂಕಿನ ಕುರಿತು ಜಾಗೃತಿ ಹಾಗೂ ಮಾಹಿತಿ ಕಲೆ ಹಾಕುವ ವೇಳೆ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದದಿಂದ ನಿಂದನೆ ಹಾಗೂ ದಾಖಲಾತಿ ಕಸಿದುಕೊಂಡು ಬೆದರಿಕೆ ಹಾಕಿದ್ದ ಪ್ರರಕಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ದೂರು ದಾಖಲಿಸಿಕೊಂಡು ಜಮಖಂಡಿ ಪೊಲೀಸ್ರು ಬಂಧಿಸಿದ್ದಾರೆ. 353,188,270,504,506 ಕಲಂ ಅಡಿ ಜಮಖಂಡಿ ನಗರದದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಬ್ದುಲ್ ರಜಾಕ್ ಗೋಮರ್ಶೆ,ಚಾಂದಸಾಬ್ ಗೋಮರ್ಶೆ
ಬಂಧನ ಮಾಡಲಾಗಿದೆ. ಆಶಾ ಕಾರ್ಯಕರ್ತೆ ಸವಿತಾ ಹೊಳಿಯಪ್ಪಗೋಳಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಲಾಗಿತ್ತು.ಜಮಖಂಡಿಯ ಗಿರೀಶ್ ನಗರ ಹಾಗೂ ರಾಮೇಶ್ವರ ಕಾಲೋನಿಯಲ್ಲಿ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ಧದಿಂದ ನಿಂದನೆ ಹಾಗೂ ಬೆದರಿಕೆ ಹಾಕಿದ ಘಟನೆ ನಡೆದಿತ್ತು.