Wednesday, June 29, 2022

Latest Posts

ಆಶುಚಿತ್ವದ ವಿರುದ್ಧ ಸಮರ: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹೊಟೇಲ್ ಗಳಿಗೆ ದಾಳಿ!

ಹೊಸದಿಗಂತ ವರದಿ, ಕೊಡಗು

ಮಡಿಕೇರಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಹೊಟೇಲ್ ಗಳು ಶುಚಿತ್ವ ಕಾಪಾಡುವಲ್ಲಿ ವಿಫಲವಾಗಿದ್ದು, ಅಂತಹ ಹೊಟೇಲ್ ಗಳಿಗೆ ತೆರಳಿ ಫೋಟೋ ಹಾಗೂ ವೀಡಿಯೋ ಮಾಡಿ ಸಂಬಂಧಿಸಿದವರ ಗಮನಸೆಳೆಯಲಾಗುವುದು ಎಂದು ಮಡಿಕೇರಿ ನಗರ ಹಿತರಕ್ಷಣಾ ಸಮಿತಿ ಎಚ್ಚರಿಸಿದೆ.

ನಗರದ ಹಲವು ಹೊಟೇಲ್ ಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಕೊರೋನಾದ ಈ ಸಂದರ್ಭದಲ್ಲಿ ಸರಕಾರದ ಆದೇಶಗಳು ಇದ್ದರೂ ಹೊಟೇಲ್ ಸಿಬ್ಬಂದಿಗಳು ಹಾಗೂ ಮಾಲಕರು ಮಾಸ್ಕ್ ಗಳನ್ನು ಹಾಕಿ ಕೊಳ್ಳದೆ ಗ್ರಾಹಕರಿಗೆ ಕಾಫಿ ತಿಂಡಿ ತಿನಿಸುಗಳನ್ನು ಹಾಗೆಯೇ ನೀಡುತ್ತಿರುವುದು ಕಂಡುಬರುತ್ತಿದೆ ಹಾಗೂ ಕೆಲವು ಹೊಟೇಲ್ ಗಳಲ್ಲಿ ಕಾಫಿ ಟೀ ಕುಡಿಯುವ ಲೋಟಗಳನ್ನು ಬಿಸಿನೀರಿನಲ್ಲಿ ತೊಳೆಯದೆ ತಣ್ಣನೆಯ ನೀರಿನಲ್ಲಿ ತೊಳೆದು ನೀಡುತ್ತಿದ್ದಾರೆ.ಹೊಟೇಲ್ ಗೆ ಬರುವ ಕೆಲವು ಗ್ರಾಹಕರು ಅಲ್ಲಿನ ಸಿಬ್ಬಂದಿಗಳಲ್ಲಿ ಮಾಸ್ಕ್ ಎಲ್ಲಿ ಎಂದು ವಿಚಾರಿಸಿದರೆ ಸಿಬ್ಬಂದಿಗಳು ಹಾಗೂ ಹೊಟೇಲಿನ ಮಾಲಕರು ಗ್ರಾಹಕರಿಗೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.

ಮಡಿಕೇರಿ ನಗರದ ಹೊಟೇಲ್ ಗಳ ಮೇಲ್ವಿಚಾರಣೆ ನಡೆಸಬೇಕಾದ ನಗರಸಭೆಯ ಆರೋಗ್ಯ ವಿಭಾಗವು ನಗರದಲ್ಲಿ ಅಶುಚಿತ್ವದಿಂದ ಕೂಡಿರುವ ಹೊಟೇಲ್ ಗಳಿಗೆ ಭೇಟಿ ನೀಡಿ ಶುಚಿತ್ವವನ್ನು ಕಾಪಾಡುವಂತೆ ಆದೇಶ ನೀಡಬೇಕು. ಅಶುಚಿತ್ವದಿದ ಕೂಡಿದ ಹೊಟೇಲ್ ಗಳ ಪರವಾನಗಿಯನ್ನು ರದ್ದು ಮಾಡಬೇಕು ಹಾಗೂ ಮಾಸ್ಕ್ ,ಗ್ಲಾಸ್ ಗಳನ್ನು ಹಾಕಿಕೊಳ್ಳದೆ ಕಾರ್ಯನಿರ್ವಹಿಸುತ್ತಿರುವ ಹೊಟೇಲ್ ಮಾಲಕರಿಗೆ ಆ ಕ್ಷಣದಲ್ಲಿ ದಂಡ ವಿಧಿಸಬೇಕು ಹಾಗೂ ಪದಾರ್ಥಗಳನ್ನು ತೆರೆದಿಟ್ಟು ಮಾರಾಟ ಮಾಡದಂತೆ ಆದೇಶ ನೀಡಬೇಕು.ಇದಕ್ಕೆ ಸಂಬಂಧಪಟ್ಟ ನಗರಸಭೆ ಹಾಗೂ ಜಿಲ್ಲಾಡಳಿತ ಕೂಡಲೇ ಹೊಟೇಲ್ ಗಳ ಶುಚಿತ್ವದ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss