Thursday, June 30, 2022

Latest Posts

ಆಸೀಸ್ ನಿಂದ ಸೇಲಂ ಗೆ ಮರಳಿದ ನಟರಾಜನ್ ಗೆ ಸಿಕ್ತು ಭರ್ಜರಿ ಸ್ವಾಗತ

ಹೊಸದಿಗಂತ ಆನ್ ಲೈನ್ ಡೆಸ್ಕ್:

ನೆಟ್ ಬೌಲರ್​ ಆಗಿ ಆಸೀಸ್ ಪ್ರವಾಸ ಕೈಗೊಂಡು ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ​ ನಟರಾಜನ್​ರನ್ನು ಸೇಲಂ ಜನರು ಮೆರವಣಿಗೆ ಮಾಡುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದಾರೆ.
ಇಂದು ಆಸ್ಟ್ರೇಲಿಯಾದಿಂದ ಚೆನ್ನೈಗೆ ಬಂದಿದ್ದ ನಟರಾಜನ್​ ಸೇಲಂಗೆ ಆಗಮಿಸುತ್ತಿದ್ದಂತೆ ಭವ್ಯವಾದ ಸ್ವಾಗತ ಸಿಕ್ಕಿದೆ. ನೂರಾರು ಮಂದಿ ತಮ್ಮ ಊರಿನ ಯುವಕನನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ದಾರಿಯುದ್ದಕ್ಕೂ ಪಟಾಕಿ ಸಿಡಿಸುತ್ತಾ, ಡೋಲು ವಾದ್ಯಗಳ ಮೂಲಕ ಹಬ್ಬದ ರೀತಿಯಲ್ಲಿ ನಟರಾಜನ್​ರನ್ನು ಸ್ವಾಗತಿಸಿದ್ದಾರೆ.
ನಟರಾಜನ್​ರಿಗೆ ಈ ರೀತಿ ಸ್ವಾಗತ ಕೋರಿರುವ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಸೆಹ್ವಾಗ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲಿ, ಅದಕ್ಕಿಂತಲೂ ಹೆಚ್ಚು. ನಟರಾಜನ್​ರನ್ನು ಸೇಲಂನ ಚಿನ್ನಂಪಟ್ಟಿ ಗ್ರಾಮದ ಜನ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್​ನಲ್ಲಿ ಸನ್​ ರೈಸರ್ಸ್​ ಹೈದರಾಬಾದ್ ಪರ ಆಡಿದ್ದ ನಟರಾಜನ್​ , 16 ಪಂದ್ಯಗಳಲ್ಲಿ 16 ವಿಕೆಟ್​ ಪಡೆದಿದ್ದರು. ಈ ಪ್ರದರ್ಶನದಿಂದಲೇ ನೆಟ್ ​ಬೌಲರ್​ ಆಗಿ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ನಂತರ ಏಕದಿನ, ಟಿ-20 ಹಾಗೂ ಟೆಸ್ಟ್​ ತಂಡದಲ್ಲೂ ಪದಾರ್ಪಣೆ ಮಾಡಿದ್ದರು. ಮೂರು ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss