ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ಹರಿಪ್ರಿಯಾ ಅಭಿನಯದ ಅಮೃತಮತಿ ಸಿನಿಮಾ

0
47

ಇತ್ತೀಚೆಗೆ ನಟಿ ಹರಿಪ್ರಿಯಾ ಐತಿಹಾಸಿಕ ಸಿನಿಮಾಗಳನ್ನೇ ಹೆಚ್ಚು ಒಪ್ಪಿಕೊಳ್ಳುತಿದ್ದಾರೆ.  ಇತ್ತೀಚೆಗೆ ಬಿಡುಗಡೆಯಾದ  ಬಿಚ್ಚುಗತ್ತಿ  ಸಿನಿಮಾ  ಸಿನಿಪ್ರಿಯರಿಂದ  ಪ್ರಶಂಸೆಗೊಂಡಿತ್ತು .ಅದೇ ರೀತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಪ್ರಮುಖ ಚಿತ್ರೋತ್ಸವಗಳು ಮುಂದಕ್ಕೆ ಹೋಗಿವೆ. ಇನ್ನು ಕೆಲವು ರದ್ದಾಗಿವೆ. ಈ ನಡುವೆ ಕೆಲವು ಚಿತ್ರೋತ್ಸವಗಳನ್ನು ಆನ್‌ಲೈನ್ ಮೂಲಕವೇ ನಡೆಸಲು ಉದ್ದೇಶಿಸಲಾಗುತ್ತಿದೆ. ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಕೂಡ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಅದರಲ್ಲಿ ಅಮೃತಮತಿ ಪ್ರದರ್ಶನಗೊಳ್ಳಲಿದೆ.ಜುಲೈ 22 ರಿಂದ ಆಗಸ್ಟ್ 5ರವರೆಗೆ ಆನ್‌ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ನಡೆಯಲಿದೆ. ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಇರುವಂತೆ ವಿವಿಧ ವಿಭಾಗ ಮತ್ತು ಸ್ಪರ್ಧೆಗಳೂ ಇರಲಿವೆ. ಮುಂದೆ ವಿಶೇಷ ಸಮಾರಂಭವನ್ನು ಆಯೋಜಿಸಿ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.

LEAVE A REPLY

Please enter your comment!
Please enter your name here