Sunday, June 26, 2022

Latest Posts

ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ಆದ ಟೀಂ ಇಂಡಿಯಾ ಆಟಗಾರರು! ಕೋಹ್ಲಿ, ಜಡೇಜಾ ಏನು ಮಾಡುತ್ತಿದ್ದಾರೆ ನೋಡಿ..

ಹೊಸದಿಗಂತ ಆನ್ ಲೈನ್ ಡೆಸ್ಕ್:

ನ.27 ರಿಂದ ಪ್ರಾರಂಭವಾಗುವ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಿರುವ ಆಟಗಾರರು 14 ದಿನಗಳು ಕ್ವಾರಂಟೈನ್ ನಲ್ಲಿದ್ದಾರೆ.

ಈ ಬಗ್ಗೆ ವಿರಾಟ್ ಕೋಹ್ಲಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದು,  ಕ್ವಾರಂಟೈನ್ ದಿನಗಳು, ಇಸ್ತ್ರಿ ಇಲ್ಲದ ಟೀ ಶರ್ಟ್ ಹಾಗೂ ಹಿತವಾಗಿರುವ ಸೋಫಾ, ಹಾಗೂ ವೀಕ್ಷಿಸಲು ಉತ್ತಮ ಸರಣಿ ಎಂದು ಬರೆದುಕೊಂಡಿದ್ದಾರೆ.

ಸರಣಿ ಮ್ಯಾಚ್ ಗಳಿಗಾಗಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ತಂಡವನ್ನು ಕ್ಯಾ. ಕೋಹ್ಲಿ ಮುನ್ನಡೆಸಲಿದ್ದು, ಸದ್ಯ ಎಲ್ಲಾ ಕ್ರಿಕೆಟಿಕರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ನೆಗಟಿವ್ ವರದಿ ಬಂದಿದೆ. 14 ದಿನಗಳ ಕ್ವಾರಂಟೈನ್ ನಂತರ ತರಬೇತಿ ಪ್ರಾರಂಭಿಸಲಾಗುತ್ತದೆ.

ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮೊದಲ ಎರಡು ಪಂದ್ಯಗಳನ್ನು ಸಿಡ್ನಿಯಲ್ಲಿ ಆಡಾಲಾಗುತ್ತದೆ. ಅಂತಿಮ ಏಕದಿನ ಪಂದ್ಯವು ಡಿಸೆಂಬರ್ 2 ರಂದು ಕ್ಯಾನ್‌ಬೆರಾದಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳ ನಂತರ ಡಿಸೆಂಬರ್ 4 ರಿಂದ ಮೂರು ಟಿ 20 ಗಳು ನಡೆಯಲಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss