ಹೊಸದಿಗಂತ ಆನ್ ಲೈನ್ ಡೆಸ್ಕ್:
ಮಹಾರಾಷ್ಟ್ರದ ಭಂಡಾರ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮೃತಪಟ್ಟ 10 ಮಕ್ಕಳಿಗೆ ರಾಜ್ಯ ಬಿಜೆಪಿ ಸಂತಾಪ ಸೂಚಿಸಿ ಇಂದು ಭಂಡಾರ ಜಿಲ್ಲೆ ಬಂದ್ ಮಾಡಲು ಕರೆ ನೀಡಿದೆ.
ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟ 10 ಮಕ್ಕಳ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ಸಂಸದ ಸುನಿಲ್ ಮೆಂಧೆ ತಿಳಿಸಿದ್ದಾರೆ.
ಸರ್ಕಾರಕ್ಕೆ ಈ ಬಗ್ಗೆ ಎಚ್ಚರಿಸಲು ಸೋಮವಾರ ಭಂಡಾರದಲ್ಲಿ ಬಂದ್ ಮಾಡಲು ಬಿಜೆಪಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.