Saturday, July 2, 2022

Latest Posts

ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಸೆಕ್ಯುರಿಟಿ ಗಾರ್ಡ್ ಸೇರಿ ಮೂವರ ಬಂಧನ

ನವದೆಹಲಿ: ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ.
ದೆಹಲಿಯ ರೋಹಿಣಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೂವರು ಕಾಮುಕರನ್ನು ಬಂಧಿಸಲಾಗಿದೆ. ಇದರಲ್ಲಿ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಕೂಡ ಒಬ್ಬರಾಗಿದ್ದಾರೆ.
ರೋಗಿಗಳ ಜೊತೆ ಬಂದವರು ತಂಗುವ ಕೊಠಡಿಯಲ್ಲಿ ಸೆಕ್ಯುರಿಟಿ ಗಾರ್ಡ್ ತಪಾಸಣೆ ನಡೆಸುತ್ತಿದ್ದ. ಈ ವೇಳೆ ಮಹಿಳೆಗೆ ಯಾರ ಜೊತೆ ಬಂದಿದ್ದೀರಿ ಎಂದೆಲ್ಲ ಗಾರ್ಡ್ ಪ್ರಶ್ನಿಸಿದ್ದಾರೆ. ಆಕೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದು, ತಪಾಸಣೆ ನೆಪದಲ್ಲಿ ಪಾರ್ಕಿಂಗ್ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.
ಪಾರ್ಕಿಂಗ್‌ನಲ್ಲಿ ಯಾರೂ ಇಲ್ಲದಾಗ ಗಾರ್ಡ್ ಕನ್ವರ್ ಪಾಲ್, ಆಸ್ಪತ್ರೆಯ ಮಾಜಿ ಬೌನ್ಸರ್‌ಗಳಾದ ಪ್ರವೀಣ್ ಹಾಗೂ ಮನೀಶ್ ಸೇರಿ ಅತ್ಯಾಚಾರ ಎಸಗಿದ್ದಾರೆ.
ಮಹಿಳೆ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss