ಹೊಸದಿಲ್ಲಿ: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪ್ರಖ್ಯಾತ ಕ್ರಿಕೆಟಿಕ ಕಪಿಲ್ ದೇವ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿದೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ ಚೇತನ್ ಶರ್ಮ, ಡಾ. ಅತುಲ್ ಅವರು ಕಪಿಲ್ ದೇವ್ ಅವರಿಗೆ ಆಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿದ್ದರು, ಹಾಗೂ ಇದೀಗ ಕಪಿಲ್ ಜಿ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ದೆಹಲಿಯ ಫೋರ್ಟಿಸ್ ಆಸ್ಪತ್ರೆ ಕಪಿಲ್ ದೇವ್ ಐಸಿಯುನಲ್ಲಿದ್ದು, ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು. ಆಂಜಿಯೋಪ್ಲ್ಯಾಸ್ಟಿ ಅನ್ನು ಹೃದ್ರೋಗ ವಿಭಾಗದ ನಿರ್ದೇಶಕ ಡಾ. ಅತುಲ್ ಮಾಥುರ್ ಅವರು ನಡೆಸಿದರು. ಡಾ. ಅತುಲ್ ಮಾಥುರ್ ಹಾಗೂ ಅವರ ತಂಡದ ನಿಕಟ ಮೇಲ್ವಿಚಾರಣೆಯಲ್ಲಿ ಕಪಿಲ್ ದೇವ್ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದಿದೆ.