Thursday, August 18, 2022

Latest Posts

ಆಸ್ಪತ್ರೆಯ ಅಂಗಳದಿಂದ ಚೇತರಿಸಿ ಬಂದು ಗಾಲ್ಫ್ ಮೈದಾನಕ್ಕೆ ಮರಳಿದ ಕಪಿಲ್!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಹೃದಯ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಖ್ಯಾತ ಕ್ರಿಕೆಟರ್ ಕಪಿಲ್ ದೇವ್ ಗಾಲ್ಫ್ ಮೈದಾನಕ್ಕೆ ಮರಳಿದ್ದಾರೆ!
೬೧ ವರ್ಷದ ಕಪಿಲ್, ವೈದ್ಯರ ಅನುಮತಿಯ ಮೇರೆಗೆ ತಮ್ಮ ನೆಚ್ಚಿನ ಕ್ರೀಡೆ ಗಾಲ್ಫ್ ಆಟಕ್ಕೆ ಮರಳಿದ್ದು, ದೆಹಲಿ ಗಾಲ್ಫ್ ಕೋರ್ಸ್‌ನಲ್ಲಿ ಸ್ನೇಹಿತರ ಜತೆಗೂಡಿ ಆಡಿ ಖುಷಿಪಟ್ಟಿದ್ದಾರೆ. ಇದನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗಾಲ್ಫ್ ಕೋರ್ಸ್, ಕ್ರಿಕೆಟ್ ಮೈದಾನಕ್ಕೆ ಮರಳಿ ಆಡುವುದರಲ್ಲಿ ಇರುವ ಸಂತೋಷವನ್ನು ಬಣ್ಣಿಸಲು ಸಾಧ್ಯವಿಲ್ಲ. ಗಾಲ್ಫ್ ಕೋರ್ಸ್‌ಗೆ ಮರಳಿರುವುದು ಸುಂದರ ಅನುಭವ. ಗೆಳೆಯರೊಂದಿಗೆ ಆಡಿ ಆನಂದಿಸಿದೆ. ಇದೇ ಅಲ್ಲವೆ ಜೀವನವೆಂದರೆ? ಎಂದು ಅವರು ಟ್ವಿಟರ್‌ನ ಸಂದೇಶ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಹೃದಯಾಘಾತದಿಂದ ಬಳಲಿದ್ದ ಕಪಿಲ್ ಬಳಿಕ ಆಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಎರಡೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!