Wednesday, August 10, 2022

Latest Posts

ಆಸ್ಪತ್ರೆಯ ಮುಂದೆ ಒದ್ದಾಡಿದರೂ ಕ್ಯಾರೇ ಎನ್ನದ ಸಿಬ್ಬಂದಿಗಳು: ಆಂಬುಲೆನ್ಸ್ ನಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ಮಹಿಳೆ

ಯಾದಗಿರಿ: ಆಸ್ಪತ್ರೆಯ ಎದುರು  ಚಿಕಿತ್ಸೆಗಾಗಿ ಒದ್ದಾಡಿದರೂ ಡೋಂಟ್ ಕೇರ್ ಮಾಡದ ಸಿಬ್ಬಂದಿಗಳು. ಚಿಕಿತ್ಸೆ ಸಿಗದೆ ಆಸ್ಪತ್ರೆಯ ಮುಂದೆ 52 ವರ್ಷದ ಮಹಿಳೆಯೊಬ್ಬಳು ತನ್ನ ಪ್ರಾಣ ಕಳೆದುಕೊಂಡ ಘಟನೆ ನಗರದ ಕೋವಿಡ್ ಆಸ್ಪತ್ರೆಯ ಮುಂದೆ ಬುಧವಾರ ಬೆಳಿಗ್ಗೆ ಜರುಗಿದೆ.
ಕೊರೋನಾ ಶಂಕೆ ಹಿನ್ನಲೆಯಲ್ಲಿ ಶಹಾಪೂರ ಆಸ್ಪತ್ರೆಯಿಂದ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗೆ ಅಕೆಯ ಸಂಬoಧಿಕು ಕರೆತರಲಾಗಿತ್ತು. ಅನಾರೋಗ್ಯ ಎಂದು ರೋಗಿಯೊಂದಿಗೆ ಸಂಬ oಧಿಕರು, ಆಸ್ಪತ್ರೆಗೆಳಿಗೆ ಅಲೆದಾಡಿದರೂ ಕೊರೋನಾ ವೈರಸ್ ಎಂದು ಯಾವ ವೈದ್ಯರು ಶಹಪೂರದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.
ಶಹಾಪುರ ತಾಲುಕಿನ ಸಗರ ಗ್ರಾಮದ ಓರ್ವ ಮಹಿಳೆ 52 ವರ್ಷ ರವರಿಗೆ ಉಸಿರಾಟದ ತೊಂದರೆ ಉಂಟಾಗಿದ್ದರಿ೦ದ ಶಹಾಪುರ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ, ಅಲ್ಲೂ ಯಾರೂ ಕೇರ್ ಮಾಡದೆ ರೋಗಿಯೊಂದಿಗೆ ಸಂಭoಧಿಕರು ಚಿಕಿತ್ಸೆಗೆ ಹರಸಾಹಸಪಟ್ಟಿದ್ದಾರೆ. ಕೊರೋನಾ ಸೊಂಕು ಎನ್ನುವ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿದರು. ನಂತರದಲ್ಲಿ ಯಾದಗಿರಿ ಆಸ್ಪತ್ರೆಗೆ ಕಳಿಸಲಾಯಿತು. ಆದರೆ ವೈದ್ಯರು ಇಲ್ಲ ಎಂದು ಹೇಳಿ ಆಕೆಯನ್ನು ಶಿಪ್ಟ ಮಾಡಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ. ಒದರಿಂದಾಗಿ ಸೂಕ್ತ ಚಿಕಿತ್ಸೆ ಸಿಗದೆ ಆಂಬುಲೆನ್ಸ್ ನಲ್ಲಿ ಒದ್ದಾಡಿ ಒದ್ದಾಡಿ ಮೃತಪಟ್ಟಿದ್ದಾಳೆ. ಇದು ವೇದ್ಯಾಧಿಕಾರಿಗಳ ಅಮಾನಿವೀಯ ಘಟನೆಗೆ ಸಾಕ್ಷಿಯಾಗಿದೆ.
ವೈದ್ಯರು ಸ್ವಾಬ್ ದ್ರಾವಣ ಪರೀಕ್ಷೆಗೊಳಪಡಿಸಿದ್ದಾರೆ. ನಂತರದಲ್ಲಿ ಶವ ಸಂಸ್ಕಾರಗಳು ಸರ್ಕಾರದ ಅನುಮಿತಿಯಂತೆ ಪಾಪುಲರ್ ಪ್ರಂಟ್ ಆಪ್ ಇಂಡಿಯಾರವರು ಸಗರದಲ್ಲಿ ನೇರವೇರಿಸಿದರು. ಈ ಘಟನಯನ್ನು ಸಂಬ೦ಧಿಕರು ತೀವ್ರವಾಗಿ ಖಂಡಿಸಿದಸಾರೆ. ವೈದ್ಯರ ನಿರ್ಲಕ್ಷ್ಯ ದಿಂದ ವೃದ್ದರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರಕಾರ ಕೂಡಲೆ ಕ್ರಮ ಜರಗಿಸಿ ಜನತೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss