ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಸ್ಪತ್ರೆ ವಾತಾವರಣ ಹಾಳು ಮಾಡುವವರು ವರ್ಗಾವಣೆ ತೆಗೆದುಕೊಳ್ಳಿ: ಹಾಲಪ್ಪ ಖಡಕ್ ಸೂಚನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಕೆಲವರು ಆಸ್ಪತ್ರೆಯಲ್ಲಿ ವೈದ್ಯರು ಲಂಚ ಪಡೆಯುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಲೋಕಾಯುಕ್ತರು ಆಸ್ಪತ್ರೆಗೆ ಬಂದು ವಿಚಾರಣೆ ಸಹ ನಡೆಸಿದ್ದಾರೆ. ಇದೆಲ್ಲಾ ಅತ್ಯಂತ ಬೇಸರದ ಸಂಗತಿ. ರೋಗಿಗಳಿಗೆ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರು ಮಾತ್ರ ಇಲ್ಲಿ ಕೆಲಸ ಮಾಡಿ. ರೋಗಿಗಳಿಂದ ಹಣ ಸುಲಿಗೆ ಮಾಡುವುದು, ಆಸ್ಪತ್ರೆ ವಾತಾವರಣ ಹಾಳು ಮಾಡುವವರು ವರ್ಗಾವಣೆ ಮಾಡಿಕೊಂಡು ಹೋಗಬಹುದು ಎಂದು ಶಾಸಕ ಹರತಾಳು ಹಾಲಪ್ಪ ಖಡಕ್ ಸೂಚನೆ ನೀಡಿದರು.
ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶನಿವಾರ ಕರೆಯಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೋಗಿಗಳಿಗೆ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರು ಮಾತ್ರ ಇಲ್ಲಿ ಕೆಲಸ ಮಾಡಿ ಎಂದು ಕಟ್ಟುನಿಟ್ಟಾಗಿ ಹೇಳಿದರು.
ಪದೇಪದೇ ಸಿಜೇರಿಯನ್ ನಡೆಸಲಾಗುತ್ತಿದೆ. ನಾರ್ಮಲ್ ಡಿಲೇವರಿ ಮಾಡುತ್ತಿಲ್ಲ. ಹೆರಿಗೆ ಮಾಡಲು ಹಣ ಪಡೆಯಲಾಗುತ್ತಿದೆ ಎನ್ನುವ ದೂರುಗಳಿವೆ. ಅನಸ್ತೇಸಿಯಾ ಕೊಡಲು ಸಹ ಹಣ ಪಡೆಯುತ್ತಿರುವುದು ಸೇರಿದಂತೆ ಅನೇಕ ದೂರುಗಳಿವೆ. ಇದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸದಸ್ಯ ಕೆ.ಆರ್. ಗಣೇಶ ಪ್ರಸಾದ್, ಆರೋಗ್ಯ ರಕ್ಷಾ ಸಮಿತಿಯ ಸತೀಶ್ ಮೊಗವೀರ, ಅಶೋಕ್, ಜ್ಯೋತಿ ನಂಜುಂಡಸ್ವಾಮಿ, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಡಾ. ವಿಕ್ರಂ, ಡಾ. ಕಾವ್ಯ, ಡಾ. ಜಯಲಕ್ಷ್ಮೀ, ಡಾ. ಸುಚಿತ್ರ, ಡಾ. ನಾಗೇಂದ್ರಪ್ಪ, ಡಾ. ಸಿದ್ದನಗೌಡ ಪಾಟೀಲ್, ವೈ.ಮೋಹನ್ ಇನ್ನಿತರರು ಹಾಜರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss