ಹೊಸ ದಿಗಂತ ವರದಿ, ಪುತ್ತೂರು:
ಕೆಎಸ್ಆರ್ಟಿಸಿ ಬಿ.ಸಿ. ರೋಡು ಘಟಕದ ಬಸ್ ಕಂಡೆಕ್ಟರ್ ನಾಗೇಶ್ (57) ತನಗೆ ಘಟಕದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲು ಕಿರುಕುಳ ನೀಡಲಾಗುತ್ತಿದ್ದು ತನಗೆ ನ್ಯಾಯ ಕೊಡಿಸಬೇಕು ಎಂದು ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿಗಳ ಬಳಿಗೆ ಸೋಮವಾರ ಬಂದಿದ್ದರು. ಕಚೇರಿಗೆ ಬರುವಾಗಲೇ ವಿಷ ಕುಡಿದು ಬಂದಿದ್ದ ನಾಗೇಶ್ ಕಚೇರಿಯಲ್ಲಿಯೇ ಅಸ್ವಸ್ತಗೊಂಡರು. ಕೂಡಲೇ ಅಸ್ವಸ್ತ ಕಂಡೆಕ್ಟರ್ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಂಡೆಕ್ಟರ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದು ಜೀವಾಪಯದಿಂದ ಪಾರಾಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.