Wednesday, August 10, 2022

Latest Posts

ಆಹಾರ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕೇ ಅಮಾಯಕರ ಮೇಲೆ ಎಫ್‌ಐಆರ್ ದಾಖಲೆಗೆ ಕಾರಣ. . !

ಹಾವೇರಿ: ರಾಜ್ಯದಲ್ಲಿ ಡ್ರಗ್ಸ್ ಸದ್ದು ಮಾಡುತ್ತಿದ್ದರೆ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟ ಅಕ್ರಮ ಕುಳಗಳ ವ್ಯವಹಾರಗಳು ಸದ್ದು ಮಾಡುತ್ತಿದ್ದು, ಈ ಅವ್ಯವಹಾರ ಕುರಿತು ಬಗೆದಷ್ಟು ಅಕ್ರಮಗಳು ಹೊರ ಬರುತ್ತಿವೆಯಲ್ಲದೆ ಇದಕ್ಕೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಈವರೆಗೂ ದಾಖಲಾಗಿರುವ ಪ್ರಕರಣಗಳಲ್ಲಿ ನಿಜವಾದ ಅಕ್ರಮ ದಂಧೆ ಮಾಡುವ ಕುಳಗಳ ಹೆಸರುಗಳ ಜಾಗೆಯಲ್ಲಿ ಅವರ ಆಪ್ತರು ಹಾಗೂ ಅವರ ಕೈಕೆಳಗೆ ಕೆಲಸ ಮಾಡುವ ಜನರ ಮೇಲೆ ಎಫ್‌ಐಆರ್ ದಾಖಲು ಮಾಡುವಂತೆ ಸ್ವತಃ ಆಹಾರ ಇಲಾಖೆಯ ಅಧಿಕಾರಿಗಳೇ ಸಲಹೆ ನೀಡಿರುವ ಬಗ್ಗೆ ಸಾಕ್ಷಿ ಲಭ್ಯವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಕಳ್ಳ ದಂಧೆಯಲ್ಲಿ ದೊಡ್ಡ ದೊಡ್ಡ ಕುಳಗಳೇ ಇರುವುದು ಬಹಿರಂಗವಾಗುತ್ತಿದೆ. ಕೆಲ ಅಕ್ರಮ ಕುಳಗಳ ಮೇಲೆ ಪಡಿತರ ಅಕ್ಕಿ ಅಕ್ರಮ ಸಂಗ್ರಹ ಮತ್ತು ಸಾಗಾಣಿಕೆ ಕುರಿತಂತೆ ಹತ್ತಾರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಆದ್ದರಿಂದ ಈ ಅಕ್ರಮ ಕುಳಗಳ ಮೇಲೆ ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಿಸುವುದನ್ನು ತಪ್ಪಿಸುವುದಕ್ಕೆ ಆಹಾರ ಇಲಾಖೆಯ ಅಧಿಕಾರಿಗಳೇ ಅವರ ಹೆಸರನ್ನು ಎಫ್‌ಐಆರ್‌ದಲ್ಲಿ ಕಾಣಿಸದೇ ಅವರ ಹಿಂಬಾಲಕರು ಸೇರಿದಂತೆ ಅವರ ಅಂಗಡಿಗಳಲ್ಲಿ ಕಾರ್ಯನಿರ್ವಹಣೆ ಮಾಡುವವರ ಹೆಸರನ್ನು ದಾಖಲಿಸುವಂತೆ ಅಕ್ಕಿ ಅಕ್ರಮ ಕುಳಗಳಿಗೆ ಕಳ್ಳ ಮಾರ್ಗಗಳನ್ನು ತೊರಿಸಿ ಕೊಡುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಗೋಡೌನನ ವ್ಯಕ್ತಿ ಯೋರ್ವರು ಹೇಳುವಂತೆ. ಪಡಿತರ ಅಕ್ಕಿ ಮತ್ತು ಸಂಗ್ರಹದ ಕಳ್ಳಾಟದಲ್ಲಿ ನನ್ನದು ಯಾವುದೇ ಪಾತ್ರವಿಲ್ಲದಿದ್ದರೂ, ಆಹಾರ ಇಲಾಖೆಯ ಹಿರಿಯ ಅಧಿಕಾರಿಯೋರ್ವರು, ಈ ಅಕ್ಕಿಯ ನಿಜವಾದ ಮಾಲೀಕರ ಹೆಸರ ಮೇಲೆ ಇಗಾಗಲೇ ಹತ್ತಾರು ಪ್ರಕರಣಗಳಿವೆ. ಆದ್ದರಿಂದ ಈ ಪ್ರಕರಣದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವುದು ಬೇಡ ನಿನ್ನ ಹೆಸರ ಮೇಲೆ ಪ್ರಕರಣವನ್ನು ದಾಖಲಿಸುತ್ತೇವೆ. ಅದು ಕೆಲವೇ ದಿನಗಳಲ್ಲಿ ಬಿದ್ದುಹೋಗುತ್ತದೆ ಎಂದು ಹೇಳಿ ನನ್ನ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಕಳೆದ ನಾಲ್ಕಾರು ವರ್ಷಗಳಿಂದ ನಾನು ಕೋರ್ಟ್‌ಗೆ ಅಲೆಯುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳ ವ್ಯವಹಾರದಲ್ಲಿ ನಿಜವಾದ ಅಕ್ರಮ ಕುಳಗಳ ಹೆಸರುಗಳನ್ನು ಬಿಟ್ಟು ಅಮಾಯಕರ ಹೆಸರನ್ನು ಸೇರಿಸುವುದಕ್ಕೆ ಆಹಾರ ಇಲಾಖೆಯ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರೆ ಈ ಅಕ್ರಮದಲ್ಲಿ ಅಧಿಕಾರಿಗಳ ಪಾತ್ರವೂ ಪ್ರಮುಖವಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇಂತಹ ಘಟನೆಗಳನ್ನು ಗಮನಿಸಿದರೆ ಬೇಲಿನೆ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಗೆ ಇದಕ್ಕಿಂತಹ ಬೇಕೆ ಉದಾಹರಣೆ ಬೇಕೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss