Sunday, July 3, 2022

Latest Posts

ಆಹಾರ ಧಾನ್ಯ ಪ್ಯಾಕಿಂಗ್ ಗೆ ಸೆಣಬಿನ ಚೀಲಗಳ ಬಳಕೆ ಕಡ್ಡಾಯ!

ಹೊಸದಿಲ್ಲಿ: ಆಹಾರ ಧಾನ್ಯ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮೂಲಕ ಸೆಣಬು ಬೆಳೆಯುವ ರಾಜ್ಯಗಳಲ್ಲಿನ ರೈತರಿಗೆ ನೇರವಾಗಿ ಅನುಕೂಲವಾಗುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
ಸಕ್ಕರೆ ಪ್ಯಾಕಿಂಗ್‌ಗೆ ಕಡ್ಡಾಯ ಸೀಲಿಂಗ್ ಅನ್ನು ಶೇ 20ರಷ್ಟು ಎಂದು ನಿಗದಿಪಡಿಸಲಾಗಿದೆ. ಶೇ 100ರಷ್ಟು ಆಹಾರ ಧಾನ್ಯಗಳು ಮತ್ತು ಶೇ 20ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಲಾಗುತ್ತದೆ. ಇದರಿಂದ ಪ್ರತಿ ರೈತನಿಗೆ ಹೆಕ್ಟೇರ್‌ಗೆ 10,000 ರೂ. ಹೆಚ್ಚುವರಿ ಆದಾಯ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಈ ನಿರ್ಧಾರದಿಂದ ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶದ 4,00,000 ರೈತರಿಗೆ ಪ್ರಯೋಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (ಜಿಎಂ) ಪೋರ್ಟಲ್‌ನಲ್ಲಿ ಸೆಣಬಿನ ಚೀಲಗಳು ಶೇ 10ರಷ್ಟು ಹರಾಜಿಗೆ ಮುಕ್ತವಾಗುತ್ತವೆ ಎಂದು ಸಚಿವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss