Wednesday, August 17, 2022

Latest Posts

ಆ್ಯಪಲ್, ಗೂಗಲ್ ಗೆ ಪರ್ಯಾಯವಾಗಿ ಭಾರತದಲ್ಲಿ ಬರಲಿದೆಯೇ ಸ್ವಂತ ಆ್ಯಪ್ ಸ್ಟೋರ್?

ಹೊಸದಿಲ್ಲಿ: ದೇಶದಲ್ಲಿ ಸದಾ ಹೊಸತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದೀಗ ದೇಶವನ್ನು ಹೆಚ್ಚು ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಆ್ಯಪಲ್ ಮತ್ತು ಆಲ್ಫಾಬೆಟ್ ಒಡೆತನದ ಗೂಗಲ್​ಗೆ ಪರ್ಯಾಯವಾಗಿ ತನ್ನದೇ ಆದ ಆ್ಯಪ್ ಸ್ಟೋರ್ ಪ್ರಾರಂಭಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಸರ್ಕಾರದ ಮೂಲಗಳಿಂದ ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ತನ್ನ ಮೊಬೈಲ್ ಸೇವಾ ಆ್ಯಪ್ ಸ್ಟೋರ್​ನ ಸಾಮರ್ಥ್ಯ ಹೆಚ್ಚಿಸಬಹುದು ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಈ ನಡುವೆ ಆಂಡ್ರಾಯ್ಡ್ ಫೋನ್ ಗಳು ತನ್ನ ಆಪ್ ಗಳನ್ನು ಪ್ರೀ ಇನ್ ಸ್ಟಾಲ್ ಮಾಡಿಕೊಳ್ಳಲು ಕಡ್ಡಾಯಗೊಳಿಸುವ ಯೋಜನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.
ಈಗಾಗಲೇ ಭಾರತದಲ್ಲಿ ಆ್ಯಂಡ್ರಾಯ್ಡ್ ಶೇ 97ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಆದ್ದರಿಂದ, ಭಾರತೀಯ ಸ್ಟಾರ್ಟ್ಅಪ್‌ಗಳನ್ನು ಮಧ್ಯಪ್ರವೇಶಿಸಿ, ಆ ವಿಭಾಗವನ್ನು ಕೈಗೆತ್ತಿಕೊಳ್ಳಬೇಕು. ಗೂಗಲ್ ಅಥವಾ ಆ್ಯಪಲ್​ಗಿಂತ ಭಿನ್ನವಾಗಿ ಆ್ಯಪ್‌ಗಳನ್ನು ಹೋಸ್ಟ್ ಮಾಡಲು ಆ್ಯಪ್ ಸ್ಟೋರ್ ಶೇ 30ರಷ್ಟು ಶುಲ್ಕ ವಿಧಿಸುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!