Tuesday, June 28, 2022

Latest Posts

ಆ.21ರ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ಕಾವೇರಿಗೆ ಯಡಿಯೂರಪ್ಪ ಬಾಗೀನ, ನಿರಾಣಿ ಸ್ವಾಗತ

ಮಂಡ್ಯ : ಜೀವನಾಡಿ ಕೃಷ್ಣರಾಜಸಾಗರ ಭರ್ತಿಯಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಅವರು ಆ.21ರಂದು ಕಾವೇರಿ ಮಾತೆಗೆ ಬಾಗೀನ ಅರ್ಪಿಸುತ್ತಿದ್ದು, ಅಂದು ಮಧ್ಯಾಹ್ನ 12-30 ರಿಂದ 1-30ರೊಳಗೆ
ಸಲ್ಲುವ ಅಭಿಜಿನ್ ಲಗ್ನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಎರಡು ವರ್ಷದಿಂದಲೂ ಕನ್ನಂಬಾಡಿ ಅಣೆಕಟ್ಟು ಇದೇ ಅವಧಿಯಲ್ಲಿ ಭರ್ತಿಯಾಗುತ್ತಿದ್ದು, ಜಿಲ್ಲೆಯ ರೈತರ ಸಂತೋಷ ಇಮ್ಮಡಿಯಾಗಿದೆ. ಕಳೆದ ಬಾರಿಯೂ ಆಗಸ್ಟ್‍ನಲ್ಲೇ ಬಾಗೀನ ಅರ್ಪಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಈ ಬಾರಿಯೂ ಆಗಸ್ಟ್ ತಿಂಗಳಲ್ಲೇ ಬಾಗೀನ ಅರ್ಪಿಸುತ್ತಿದ್ದು, ಜಿಲ್ಲೆಯ ರೈತಾಪಿ ವರ್ಗದ ಪರವಾಗಿ ಶಾಸಕರು ಹಾಗೂ ನಿರಾಣಿ ಷುಗರ್ಸ್‍ನ ಅಧ್ಯಕ್ಷರೂ ಆದ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ್ದಾರೆ.
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ ಕನ್ನಂಬಾಡಿಗೆ ಬಾಗೀನ ಅರ್ಪಿಸಿದ ಮುಖ್ಯಮಂತ್ರಿಗಳಲ್ಲಿ ಅತಿ ಹೆಚ್ಚು ಬಾರಿ ಬಾಗೀನ ಅರ್ಪಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯಡಿಯೂಪ್ಪ ಅವರು ಪಾತ್ರರಾಗಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದ ಅವಧಿಯಲ್ಲಿ ಕೃಷ್ಣರಾಜಸಾಗರ ಸೇರಿದಂತೆ ರಾಜ್ಯದ ಹಲವು ಜಲಾಶಯಗಳು ತುಂಬಿ ಹರಿಯುತ್ತಿವೆ. ಇದು ರೈತರಿಗೆ ಮತ್ತಷ್ಟು ಸಂತೋಷ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಚಿವರು, ಸಂಸದರು, ಶಾಸಕರನ್ನು ಜಿಲ್ಲೆಯ ರೈತರು, ಸಾರ್ವಜನಿಕರು ಹಾಗೂ ಪಿಎಸ್‍ಎಸ್‍ಕೆ ಕಾರ್ಖಾನೆ ಪರವಾಗಿ ಸ್ವಾಗತಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss