ಮಾತೃಭಾಷೆ ಕಲಿಯುವುದು ಸುಲಭ.ಮನೆಯಲ್ಲಿ ಮಾತನಾಡುವ ಭಾಷೆ ಅದೇ ಆಗಿರುವುದರಿಂದ ಬೇಗ ಅದನ್ನು ಕಲಿತುಬಿಡುತ್ತೇವೆ. ಆದರೆ ಇಂಗ್ಲಿಷ್ ಕಬ್ಬಿಣದ ಕಡಲೆ. ಇಂಗ್ಲಿಷ್ ಅನಿವಾರ್ಯ ಅಲ್ಲದಿದ್ದರೂ ಕೆಲಸದಲ್ಲಿ, ಏನನ್ನೋ ಅರ್ಥಮಾಡಿಕೊಳ್ಳಲು ಇಂಗ್ಲಿಷ್ ಬೇಕಾಗುತ್ತದೆ. ನೂರು ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ನಮ್ಮ ಭಾಷೆಯ ಸ್ಥಾನಮಾನ ಹೃದಯದಲ್ಲಿದ್ದರೆ ಸಾಕು. ಯಾವುದಾದರೂ ಕೆಲಸಕ್ಕೆ ಇಂಟರ್ವ್ಯೂಗೆ ಹೋದರೆ ಇಂಗ್ಲಿಷ್ನಲ್ಲಿಯೇ ಪ್ರಶ್ನಿಸುತ್ತಾರೆ. ಉತ್ತರ ಗೊತ್ತಿದ್ದರೂ ಕಾನ್ಫಿಡೆನ್ಸ್ ಇರುವುದಿಲ್ಲ ಏಕೆಂದರೆ ಭಾಷೆ ಗೊತ್ತಿಲ್ಲ. ಇಂಗ್ಲಿಷ್ ಕಲಿಯುವ ಮುನ್ನ ಯಾವ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.. ನೋಡಿ
- ತಪ್ಪು ಮಾಡಿ: ಇಂಗ್ಲಿಷ್ ಬರಬೇಕೆಂದರೆ ಮೊದಲು ತಪ್ಪು ಮಾಡು, ತಪ್ಪು ಬರೆಯಿರಿ, ತಪ್ಪು ಮಾತನಾಡಿ. ತಪ್ಪು ಮಾಡಿದರೂ ಕಾನ್ಫಿಡೆನ್ಸ್ ಇರಲಿ. ತಪ್ಪು ಮಾಡಿದರೆ ಯಾರಾದರೂ ಸರಿ ಮಾಡುತ್ತಾರೆ. ನಂತರ ನೀವು ಕಲಿಯುತ್ತೀರಿ.
- ಇಂಗ್ಲಿಷ್ ವಾತಾವರಣವಿರಲಿ: ಸುತ್ತಮುತ್ತ ಇಂಗ್ಲಿಷ್ ವಾತಾವರಣವಿರಲಿ. ಇಂಗ್ಲಿಷ್ ಸಿನಿಮಾ, ಇಂಗ್ಲಿಷ್ ಸೀರೀಸ್ ಈ ರೀತಿ ಮಾಡಿ. ಇವನ್ನು ನೋಡುತ್ತಾ ಇದ್ದರೆ ಹೊಸ ಪದಗಳ ಪರಿಚಯ ಆಗುತ್ತದೆ. ಅಲ್ಲದೇ ಟ್ರೆಂಡ್ಗೆ ತಕ್ಕ ಇಂಗ್ಲಿಷ್ ನಿಮ್ಮದಾಗುತ್ತದೆ.
- ಪ್ರಾಕ್ಟೀಸ್ ಮಾಡಿ: ಪ್ರತಿದಿನ ಒಂದು ಪುಟ ಇಂಗ್ಲಿಷ್ ಬರಿಯಿರಿ. ಹಾಗೇ ಒಂದು ಪುಟ ಓದಿ ಮತ್ತು ಕನ್ನಡಿ ಮುಂದೆ ಅಥವಾ ಸ್ನೇಹಿತರ ಜೊತೆ ಹತ್ತು ನಿಮಿಷ ಇಂಗ್ಲಿಷ್ನಲ್ಲಿ ಮಾತನಾಡಿ. ಹೀಗೆ ಮಾಡುತ್ತಾ ಹೋದರೆ ಖಂಡಿತಾ ಇಂಗ್ಲಿಷ್ ಬರುತ್ತದೆ.
- ನೋಟ್ಬುಕ್ ಇಟ್ಟುಕೊಳ್ಳಿ: ಕಷ್ಟವಾದ ಪದಗಳನ್ನು ಲಿಸ್ಟ್ ಮಾಡಿಕೊಳ್ಳಿ. ಇವನ್ನು ಪದೇ ಪದೆ ಬಳಸುತ್ತೀರಿ ಆದರೆ ಬಾಯಿಗೆ ಬರುವುದಿಲ್ಲ. ಅಂಥವುಗಳ ಲಿಸ್ಟ್ ಮಾಡಿ.
- ಸಹಾಯ ಕೇಳಿ: ನೀವೊಬ್ಬರೇ ಇಂಗ್ಲಿಷ್ ಮಾತನಾಡುವುದು ಕಷ್ಟವೆನಿಸಿದರೆ, ಇನ್ನೊಬ್ಬರಿಗೆ ಸಹಾಯ ಕೇಳಿ. ಅವರ ಹತ್ತಿರ ಕಲಿತುಕೊಳ್ಳಿ. ಇಲ್ಲ ಯೂಟ್ಯೂಬ್ ಟ್ಯೂಟೋರಿಯಲ್ಗಳನ್ನು ಫಾಲೋ ಮಾಡಿ.
- ಮಕ್ಕಳ ಪುಸ್ತಕ ಓದಿ: ಮೊದಲಿಗೆ ಕಲಿಯುವಾಗ ದೊಡ್ಡ ಪುಸ್ತಕ ಓದಲು ಹೋಗಬೇಡಿ. ಮಕ್ಕಳ ಪುಸ್ತಕ ಓದಿ. ಅದರಲ್ಲಿ ಸಿಂಪಲ್ ಇಂಗ್ಲಿಷ್ ಇರುತ್ತದೆ ಇದರಿಂದ ನಿಮ್ಮ ಕಲಿಕೆ ಆರಂಭಿಸಬಹುದು.