Monday, July 4, 2022

Latest Posts

ಇಂಡಿಯನ್ ಪ್ರೀಮಿಯರ್ ಲೀಗ್ 2021 ಆವೃತ್ತಿಗೆ ಸಜ್ಜಾಗುತ್ತಿದೆ ಬಿಸಿಸಿಐ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆವೃತ್ತಿಗೆ ಮೈದಾನ ಸಜ್ಜಾಗುತ್ತಿದೆ.
ಡಿಸೆಂಬರ್‌ನಲ್ಲಿ ನೂತನ ಫ್ರಾಂಚೈಸಿ ಸೇರಿಸುವ ವಿಚಾರಕ್ಕೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಾರ್ಷಿಕ ಸಭೆ ಕರೆಯಲು ಸಿದ್ಧತೆ ನಡೆಸಿದೆ.
2021ರಲ್ಲಿ 9 ಐಪಿಎಲ್ ಫ್ರಾಂಚೈಸಿಗಳನ್ನು ತರಲು ಬಿಸಿಸಿಐ ಉತ್ಸುಕವಾಗಿದೆ. 2023ರ ವೇಳೆಗೆ ಒಟ್ಟಾರೆ 10 ಫ್ರಾಂಚೈಸಿಗಳನ್ನು ಕಣಕ್ಕಿಳಿಸುವ ಆಲೋಚನೆ ಬಿಸಿಸಿಐ ಮಾಡುತ್ತಿದೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು .
ಬಿಸಿಸಿಐ ಸಂವಿಧಾನದಂತೆ ಹೊಸ ಐಪಿಎಲ್ ಫ್ರಾಂಚೈಸಿಯಂತವಕ್ಕೆ ಟೆಂಡರ್ ಕರೆಯಲು ವಾರ್ಷಿಕ ಸಭೆಯ ಅಗತ್ಯವಿರುತ್ತದೆ. ಹೀಗಾಗಿ ದೀಪಾವಳಿ ಬಳಿಕ ಈ ಸಮಸ್ಯೆಯನ್ನು ಬಗೆಹರಿಸಲು ಬಿಸಿಸಿಐ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss