Thursday, June 30, 2022

Latest Posts

ಇಂಡಿಯಾ ಹೆಸರು ಬದಲಾವಣೆ ವಿಚಾರಣೆ ಮುಂದೂಡಿದ ಸುಪ್ರೀಂ

ಹೊಸದಿಲ್ಲಿ: ರಾಷ್ಟ್ರೀಯತೆ ಬಗ್ಗೆ ಹೆಮ್ಮೆಯ ಭಾವ ಮೂಡಿಸಲು ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸುವಂತೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಯಾವುದೇ ದಿನಾಂಕ ನಿಗದಿ ಮಾಡದೆ, ವಿಚಾರಣೆಯನ್ನು ಮಂಗಳವಾರ ಮುಂದೂಡಿದೆ.

ನಮಃ ಎಂಬವರು ಈ ಮನವಿ ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಯನ್ನು ವಿಚಾರಣೆಗೆ ಪಟ್ಟಿಮಾಡಲಾಗಿತ್ತು. ಆದರೆ ವಿಚಾರಣೆ ನಡೆಸಲು ನ್ಯಾಯಪೀಠ ಲಭ್ಯವಿಲ್ಲದ ಕಾರಣ ವಿಚಾರಣೆ ಮುಂದೂಡಲಾಗಿದೆ. ದೇಶವನ್ನು ಇಂಡಿಯಾ ಎಂದು ಸಂಭೋಧಿಸುವುದನ್ನು ನಿಲ್ಲಿಸಿ, ಭಾರತ ಎಂದು ಕರೆಯುವಂತೆ ಮಾಡಲು ಅವಕಾಶ ನೀಡಬೇಕಾಗಿ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಿತ್ತು.

ಅಲ್ಲದೆ, ವಸಾಹತು ಶಾಹಿಗಳ ಕಾಲದಲ್ಲಿ ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಪ್ರಸಕ್ತ ದೇಶದ ಸ್ವಾತಂತ್ರ್ಯ ಸಂಕೇತವಾಗಿ ಭಾರತ ಎಂದು ಹೆಸರನ್ನು ಬದಲಿಸಬೇಕು ಇದು ರಾಷ್ಟ್ರೀಯತರ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss