Wednesday, August 17, 2022

Latest Posts

ಇಂಡೋ-ಪೆಸಿಫಿಕ್ ಭಾಗದ ಚಿತ್ರಣವನ್ನು ಬದಲಿಸುತ್ತಿದೆ ಭಾರತ-ಆಸ್ಟ್ರೇಲಿಯಾ ನಡುವಿನ ಸಮರಾಭ್ಯಾಸ!

ಮೆಲ್ಬೋರ್ನ್: ಜಾಗತಿಕ ರಾಜಕಾರಣದಲ್ಲಿ ಭಾರತ ಕೇಂದ್ರ ಬಿಂದುವಾಗುತ್ತಾ ಸಾಗಿದೆ . ಜಗತ್ತಿಗೆ ಸಂಕಷ್ಟ ತಂದೊಡ್ಡುತ್ತಿರುವ ಚೀನಾದಿಂದ ಬೇಸತ್ತಿರುವ ಈ ರಾಷ್ಟ್ರಗಳು, ಡ್ರ್ಯಾಗನ್ ರಾಷ್ಟ್ರವನ್ನು ಮಣಿಸಲು ಸಜ್ಜಾಗಿವೆ.
ಹೀಗಾಗಿ ಪ್ರಬಲ ರಾಷ್ಟ್ರಗಳು ಇದೀಗ ಭಾರತಕ್ಕೆ ಮತ್ತಷ್ಟು ಹತ್ತಿರವಾಗುತ್ತಿವೆ. ಭಾರತದ ಪಾಲುದಾರಿಕೆಯ ಬಯಕೆಯನ್ನು ವ್ಯಕ್ತಪಡಿಸುತ್ತಲೇ ಇವೆ.
ಚೀನಾ ಮಣಿಸಲು ಭಾರತದ ನೆರವು ಬೇಕು ಎಂದು ಅರಿತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವನ್ನು ಮತ್ತಷ್ಟು ಹತ್ತಿರಕ್ಕೆ ಕರೆದುಕೊಳ್ಳಲು ಆರಂಭಿಸಿ ವರ್ಷಗಳೇ ಕಳೆದಿವೆ.
ಅದರಂತೆ ಇದೀಗ ಆಸ್ಟ್ರೇಲಿಯಾ ಕೂಡ ಭಾರತಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದು, ರಕ್ಷಣೆ, ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪಾಲುದಾರಿಕೆಯನ್ನು ಬಯಸಿದೆ.

 

ಈ ಕುರಿತು ಮಾತನಾಡಿರುವ ಆಸ್ಟ್ರೇಲಿಯಾ ರಕ್ಷಣಾ ಸಚಿವೆ ಲಿಂಡಾ ರೆನಾಲ್ಡ್ಸ್, ಹಿಂದೂ ಮಹಾಸಾಗರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಂಟಿ ನೌಕಾ ವ್ಯಾಯಾಮ ಸಮಗ್ರ ಕಾರ್ಯತಂತ್ರದ ಪಾಲುದಾರರಾಗಿ ಬಲಪಡಿಸಿದ ಸಂಬಂಧಗಳ ಪ್ರತಿಬಿಂಬವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಆಸ್ಟ್ರೇಲಿಯಾ ಮತ್ತಷ್ಟು ಹತ್ತಿವಾಗಿದ್ದು, ಈ ಸಾಮರಿಕ ಹಾಗೂ ವಾಣಿಜ್ಯ ಸಂಬಂಧ ಇಂಡೋ-ಪೆಸಿಫಿಕ್ ಭಾಗದ ಚಿತ್ರಣವನ್ನು ಬದಲಿಸಲಿದೆ ಎಂದು ಲಿಂಡಾ ರೆನಾಲ್ಡ್ಸ್ ಭರವಸೆ ವ್ಯಕ್ತಪಡಿಸಿದ್ದಾರೆ.
ಜಂಟಿ ನೌಕಾ ಸಮರಾಭ್ಯಾಸ ಭಾರತ-ಆಸ್ಟ್ರೇಲಿಯಾದ ಸಾಮರಿಕ ಸಂಬಂಧವನ್ನು ಮತ್ತಷ್ಟು ಹತ್ತಿರಕ್ಕೆ ತಂದಿದ್ದು, ಈ ಎರಡೂ ರಾಷ್ಟ್ರಗಳ ನಡುವಿನ ಗಟ್ಟಿ ಸ್ನೇಹ ಭವಿಷ್ಯದಲ್ಲಿ ಚೀನಾಗೆ ಭಾರೀ ಹೊಡೆತ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!