Thursday, March 4, 2021

Latest Posts

ಇಂತಹ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನೀವು ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ.. ಮನೆಯಲ್ಲಿಯೇ ಇದೇ ಪವರ್ ಫುಲ್ ಮದ್ದು…  

ನಾವೇ ವಾಸಿ ಮಾಡಬಹುದಾದ ಕಾಯಿಲೆಗಳಿಗೆಲ್ಲ ಆಸ್ಪತ್ರೆಗೆ ಹೋಗ ಬಾರದು. ಮನೆಯಲ್ಲಿಯೇ ಅವುಗಳನ್ನು ಕಡಿಮೆ ಮಾಡಬಹುದು. ಆದರೆ ದೊಡ್ಡ ದೊಡ್ಡ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ವೈದ್ಯರನ್ನು ಭೇಟಿ ಮಾಡಲೇ ಬೇಕು. ಯಾವೆಲ್ಲ ಕಾಯಿಲೆಗಳಿಗೆ ಮನೆಯಲ್ಲಿಯೇ ಔಷಧವಿದೆ ನೋಡಿ…

ಪಿತ್ತ:
ದಿನವೂ ತಾಮ್ರದ ಪಾತ್ರೆಯ ನೀರನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ. ಮತ್ತು ತೂಕ ಇಳಿಕೆಗೆ ಸಹಾಯವಾಗುತ್ತದೆ.

ಒತ್ತಡ:
ಕಿತ್ತಳೆ ಹಣ್ಣಿನ ವಾಸನೆ ತೆಗೆದುಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಹಣ್ಣನ್ನು ಸೇವಿಸುವುದರಿಂದ ದೇಹ ಮತ್ತು ಮನಸ್ಸು ಲವಲವಿಕೆಯಿಂದ ಇರುತ್ತದೆ.

ಅರೆ ತಲೆನೋವು:
ನಿಮಗೆ ಒಂದೇ ಬದಿಗೆ ತಲೆನೋವು ಬರುತ್ತಿದ್ದರೆ ವೀಳ್ಯದೆಲೆಯನ್ನು ಅರೆದು ಪೇಸ್ಟ್ ಮಾಡಿ ಹಣೆಗೆ ಹಚ್ಚಿಕೊಳ್ಳಿ. ಹೀಗೆ ಮಾಡಿದರೆ ಅರೆ ತಲೆನೋವು ನಿವಾರಣೆಯಾಗುತ್ತದೆ.

ರಕ್ತ ಶುದ್ಧಿ:
ರಕ್ತ ಶುದ್ಧಿಯಾಗಲು ದಿನವೂ ಬಿಸಿ ಬಿಸಿ ನೀರಿಗೆ ಚಿಟಿಕೆ ಅರಿಶಿಣ ಹಾಕಿಕೊಂಡು ಸೇವಿಸಬೇಕು. ಇದರಿಂದ ರಕ್ತ ಶುದ್ಧಿಯಾಗುತ್ತದೆ.

ಲೋ ಬಿಪಿ:
ಲೋ ಬಿಪಿ ಆದ ತಕ್ಷಣ ಮೈ ಎಲ್ಲ ಬೆವರಲು ಪ್ರಾರಂಭವಾಗುತ್ತದೆ. ದೇಹ ನಡುಗುತ್ತದೆ. ಹೀಗೆ ಆದ ತಕ್ಷಣ ಸಕ್ಕರೆ ನೀರನ್ನು ಸೇವಿಸಿ. ಆದರೂ ಕಡಿಮೆ ಆಗದಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಕುರ:
ಕುರ ಆದರೆ ಕುಂಕುಮಕ್ಕೆ ಕೊಬ್ಬರಿ ಎಣ್ಣೆಯನ್ನು ಸೇರಿಸಿಕೊಂಡು ಅದನ್ನು ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ಕುರ ಕಡಿಮೆ ಆಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!