spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಂದಿನಿಂದ ಕೆ ಎಸ್ ಆರ್ ಟಿ ಸಿ AC ಬಸ್ ಆರಂಭ: ಬುಕ್ಕಿಂಗ್ ಪ್ರಾರಂಭ

- Advertisement -Nitte

ಬೆಂಗಳೂರು: ರಾಜ್ಯದ ಹಲವೆಡೆ ಎಸಿ ಬಸ್ ಸೇವೆ ಆರಂಭ ವಾಗುತ್ತಿದೆ. ಈಗಾಗಲೇ ಬುಕ್ಕಿಂಗ್‌ ಸಹ ಶುರುವಾಗಿದೆ. ಸಾರಿಗೆ ನಿಗಮ ರಾಜ್ಯದಾದ್ಯಂತ ಹವಾ ನಿಯಂತ್ರಿತ ಬಸ್ ಗಳ ಸೇವೆಯನ್ನು ಹಂತ‌ ಹಂತವಾಗಿ ಆರಂಭಿಸಲು ಮುಂದಾಗಿದೆ.

ಇಂದಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಹವಾನಿಯಂತ್ರಿತ ಬಸ್ ಕಾರ್ಯಾಚರಣೆ ಆರಂಭಿಸುತ್ತಿದೆ. ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆ ಮಾರ್ಗದ ಎಸಿ ಬಸ್ ಸೇವೆ ಆರಂಭಿಸಲಾಗಿದೆ.

ಕೂರೋ ಮುಂಚೆ ರಾತ್ರಿ ಪಾಳಿಯ ಸಾರಿಗೆ ಬಸ್ ಗಳಲ್ಲಿ ಹವಾನಿಯಂತ್ರಿತ ಬಸ್ ಗಳಲ್ಲಿ ಕುಡಿಯುವ ನೀರು, ಹೊದಿಕೆ‌ ಕೊಡುತ್ತಿದ್ದರು.

ಆದರೀಗ ಸಾರಿಗೆ ನಿಗಮ ಹೊದಿಕೆ ಕೊಡುವ ಸಾಹಸ ಮಾಡುತ್ತಿಲ್ಲ‌.‌ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಹೊದಿಕೆ‌ ಕೊಟ್ಟರೆ ಅವುಗಳ ಸ್ಯಾನಿಟೈಸ್, ಶುದ್ಧತೆ ಕೆಲಸ ಸಾರಿಗೆ ನಿಗಮ ಮಾಡುವುದು ಕಷ್ಟವಾಗುತ್ತದೆ. ಕೊರೋನಾ ಮುಂಜಾಗ್ರತಾ ಕ್ರಮವಾಗಿ ಇನ್ನು ಮುಂದೆ ಪ್ರಯಾಣಿಕರೇ ಹೊದಿಕೆ ತರುವಂತೆ ಮಾಹಿತಿ ನೀಡಿದೆ.

ಇದರಿಂದ ರಾತ್ರಿ ದೂರ ದೂರದ ತಮ್ಮೂರಿಗೆ ತೆರಳುವ ಪ್ರಯಾಣಿಕರು ಹವಾನಿಯಂತ್ರಿತ ಸಾರಿಗೆ ಸ್ಲೀಪರ್ ಬಸ್ ಗಳಲ್ಲಿ ಬರುವವರು ತಾವೇ ಹೊದಿಕೆ ತರಬೇಕು.‌ ಸಾರಿಗೆ ನಿಗಮದ ಎಸಿ ಬಸ್‌ಗಳಲ್ಲಿ 24-25 ಸೆಂಟಿಗ್ರೇಡ್ ತಾಪಮಾನವಿರಲಿದೆ. ಮೊದಲೆಲ್ಲ ಹವಾಮಾನ ತಕ್ಕಂತೆ ತಾಪಮಾನ ಬದಲಾಯಿಸಬಹುದಿತ್ತು. ಆದರೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಇಲ್ಲಿಯವರೆಗೆ ಬಂದ್ ಆಗಿದ್ದ ಎಸಿ ಬಸ್ ಗಳ ರಾಜ್ಯದಾದ್ಯಂತ ಕಾರ್ಯಾಚರಣೆ ಶುರುವಾಗುತ್ತಿದೆ. ಮುಂದೆ ಹಂತ‌ಹಂತವಾಗಿ ರಾಜ್ಯದೆಲ್ಲೆಡೆ ಎಸಿ ಬಸ್ ಸೇವೆ ನೀಡಲಾಗುವುದು ಎಂದು ಸಾರಿಗೆ ನಿಗಮ ಇಲಾಖೆ ಮಾಹಿತಿ ನೀಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss