ಹೊಸದಿಲ್ಲಿ: ದೇಶಾವ್ಯಾಪಿ ಲಾಕ್ ಡೌನ್ ವೇಳೆಯಲ್ಲಿ ಸ್ಥಗಿತಗೊಳಿಸಿದ್ದ ರೈಲ್ವೇ ಸೇವೆ ಮೇ 12ರಿಂದ ಪ್ರಾರಂಭವಾಗಲಿದೆ.
ಮೇ.12ರಿಂದ ದೇಶದಲ್ಲಿ 30 ರೈಲುಗಳು ಪ್ರಯಾಣ ನಡೆಸಲಿದ್ದು, ಮೇ 12 ರಂದು ಬೆಂಗಳೂರಿನಿಂದ ದೆಹಲಿಗೆ ರೈಲು ಹೊರಡಲಿದ್ದು, ದೆಹಲಿಯಿಂದ ಬೆಂಗಳೂರಿಗೆ ರಾತ್ರಿ 9:15ಕ್ಕೆ ಹೊರಟು ಬರಲಿದೆ.
ಪ್ರಯಾಣಿಕರು 90 ನಿಮಿಷಗಳ ಮುಂಚಿತವಾಗಿ ರೈಲ್ವೇ ನಿಲ್ದಾಣ ತಲುಪಬೇಕಿದ್ದು, ಈ ಸಮಯದಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ, ಸ್ಕ್ರೀನಿಂಗ್ ಗಳನ್ನು ಮಾಡಲಾಗುತ್ತದೆ. ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಅವರ ಪ್ರಯಾಣ ರದ್ದು ಮಾಡಲಾಗುತ್ತದೆ.
ಪ್ರಯಾಣಿಕರಿಗೆ ಸೂಪರ್ ಫಾಸ್ಟ್ ರೈಲಿನ ಟಿಕೆಟ್ ದರ ನಿಗದಿಪಡಿಸಲಾಗದ್ದು, ಯಾವುದೇ ತತ್ಕಾಲ್ ಬಿಕ್ಕಿಂಗ್ ಸೇವೆ ಇರುವುದಿಲ್ಲ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಹಾಗೂ ವೈದ್ಯಕೀಯ ತಪಾಸಣೆಗಳು ಕಡ್ಡಾಯ ಮಾಡಲಾಗಿದೆ. ಪ್ರಯಾಣಿಕರೆ ತಮ್ಮ ಊಟ, ಹೊದಿಕೆಗಳನ್ನು ತರಬೇಕು ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಟಿಕೆಟ್ ಬುಕ್ ಮಾಡಲು ಐಆರ್ ಸಿಟಿಸಿ ವೆಬ್ ಸೈಟ್ ಅಥವಾ ಮೊಬೈಲ್ ಆಪ್ ನಿಂದ ಬುಕ್ ಮಾಡಬಹುದಾಗಿದೆ.
ರೈಲು ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡದೆ ಕೇವಲ ನಿಗದಿತ ನಿಲ್ದಾಣ ಮತ್ತು ಕೆಲವು ಪ್ರದೇಶಗಳಲ್ಲಿ ಮಾತ್ರ ರೈಲು ನಿಲ್ಲಲಿದೆ.
ವೈದ್ಯಕೀಯ ತಪಾಸಣೆ: ಪ್ರಯಾಣಿಕರಿಗೆ ರೈಲ್ವೇ ನಿಲ್ದಾಣದಲ್ಲಿ ಸ್ಕ್ರೀನಿಂಗ್ ತಪಾಸಣೆ ನಡೆಸಲಾಗುತ್ತದೆ. ಎಲ್ಲಾ ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ತಪಾಸಣೆ ವೇಳೆಯಲ್ಲೆ ಕೊರೋನಾ ಸೋಂಕಿನ ರೋಗ ಲಕ್ಷಣಗಳು ಕಂಡು ಬಂದರೆ ಅವರ ಪ್ರಯಾಣ ರದ್ದುಗೊಳಿಸಲಾಗುವುದು.
Indian Railways issues the timings of 30 special trains to be run with effect from 12th May. pic.twitter.com/fvwxMrL3P3
— ANI (@ANI) May 11, 2020