ಡೆಹ್ರಾಡೂನ್: ಹಿಮಾಲಯ ದೇವಾಲಯಗಳ ದ್ವಾರ ಎಂದೇ ಪ್ರಸಿದ್ಧವಾದ ಪಂಚಧಾಮಗಳಲ್ಲಿ ಒಂದಾದ ಬದರೀನಾಥ ದೇವಾಲಯದ ದ್ವಾರವನ್ನು ಶುಕ್ರವಾರ ಬೆಳಿಗ್ಗೆ 4:30 ಕ್ಕೆ ಸೀಮಿತ ಅರ್ಚಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗಿದೆ.
ಆರು ತಿಂಗಳು ಮಾತ್ರ ಭಕ್ತರಿಗೆ ದರ್ಶನ ನೀಡುವ ಬದರಿನಾಥ ದೇವಾಲಯ ಕಳೆದ ನವೆಂಬರ್ ನಲ್ಲಿ ಬಾಗಿಲು ಹಾಕಲಾಗಿತ್ತು. ಪ್ರತೀ ವರ್ಷ ಚಳಿಗಾಲ ಬಾಗಿಲು ಹಾಕಿ ಇನ್ನುಳಿದ ಸಂದರ್ಭದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಬಾಗಿಲು ತೆರೆದ ಬಳಿಕ ಮೊದಲ ಪೂಜೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಲ್ಲಿಸಲಾಗಿದ್ದು ಪ್ರಧಾನ ಅರ್ಚಕ ರಾವಲ್ ಈಶ್ವರಿ ಪ್ರಸಾದ್ ನಂಬೂದಿರಿ ಪೂಜೆ ನಡೆಸಿದ್ದಾರೆ.
ದೇವಸ್ಥಾನ ಬಾಗಿಲು ತೆರೆಯುವ ವೇಳೆ ಲಾಕ್ ಡೌನ್ ನಿಯಮಗಳನ್ನು ಪಾಲಿಸಲಾಗಿದ್ದು ,ಸಾಮಾಜಿಕ ಅಂತರ ಮಾಸ್ಕ್ ಗಳನ್ನು ಧರಿಸಲಾಗಿದೆ. ಕೊರೋನಾ ದಿಂದಾಗಿ ಭಕ್ತರು ಇಲ್ಲದೇ ಕೇವಲ ಅರ್ಚಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದಾರೆ.ದೇವಾಲಯವನ್ನು ಹತ್ತು ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ.