ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಲಿದ್ದಾರೆ.
ನಾಳೆಯಿಂದ ಮುಘಲ್ ಉದ್ಯಾನ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಮೊಘಲ್ ಉದ್ಯಾನಗಳಲ್ಲದೆ,ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುವುದು.
ಪ್ರವಾಸಿಗರು ಕೂಡ ಚೇಂಜ್ ಆಫ್ ಗಾರ್ಡ್ ಸಮಾರಂಭವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.