Monday, July 4, 2022

Latest Posts

ಇಂದಿನ ಕೆಲ ಸ್ವಪ್ರತಿಷ್ಟೆ ನಟರಿಗೆ ನಮ್ಮಂತಹ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ: ನವರಸ ನಾಯಕ ಜಗ್ಗೇಶ್

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಪ್ಯಾನ್ ಇಂಡಿಯಾ ಸಿನಿಮಾ ಮತ್ತು ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನವರಸ ನಾಯಕ ಜಗ್ಗೇಶ್ ಅಭಿಪ್ರಾಯ ವ್ಯಕ್ತ ಪಡಿಸಿದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

ನವರಸ ನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡೋಲ್ಲಾ. ಪ್ಯಾನ್ ಇಂಡಿಯಾದಿಂದ ನಮ್ಮ‌ ಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ‌ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ‌ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಪರ – ವಿರೋಧ ನಡೆಯುತ್ತಲೇ ಇವೆ.

ಇದೀಗ ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್ ತುಂಬ ಚರ್ಚೆಬೇಡ ಒಂದು ಸತ್ಯಹೇಳಿ ಮುಗಿಸುವೆ! ಸ್ನೇಹಿತರೆ ಇಂದಿನ ಕೆಲ ಸ್ವಪ್ರತಿಷ್ಟೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ!ನಾವು ಹೋದರೆ ಅಥವಾ ಸತ್ತರೆ ಇವರೆ ವಾರಸುದಾರರು ಎಂಬ ಕೆಟ್ಟ ಚಿಂತೆ ಇದೆ!ಕೆಲ ನಟರ ಆಡಿಯೋ ಸಂಭಾಷೆಯನ್ನು ಕೇಳಿಸಿದ್ದಾರೆ! ಹೀಗಿರಬೇಕಾದರೆ ಇಂದಿನ ಚಿಂತನೆ!ರಾಯರಿಗೆ ಒಪ್ಪಿಸಿ ಶಕ್ತಿ ಇರುವಷ್ಟು ದುಡಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss