ಬೆಂಗಳೂರು: ಕೊರೋನಾ ಆತಂಕದ ನಡುವೆಯೇ ದ್ವೀತಿಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟವಾಗಿದೆ. ಹಾಗೆಯೇ ಕೊರೋನಾ ಆತಂಕದ ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ಯಶಸ್ವಿಯಾಗಿ ನಡೆಸಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ.
ಇಂದು ಮದ್ಯಾಹ್ನ ೩ ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಪರೀಕ್ಷಾ ಇಲಾಖೆಯ www.kseeb.kar.nic.in, www.karresults.nic.in ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವನ್ನು ನೋಡಬಹುದು.ಫಲಿತಾಂಶ ನೋಡಲು ಪತ್ಯೇಕವಾಗಿ ಯಾವುದೇ ನೋಂದಣಿಯನ್ನು ಮಾಡುವುದು ಬೇಡ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ನಂಬರ್ಗೆ ಪಲಿತಾಂಶ ಬರಲಿದೆ. ಇಲ್ಲವಾದಲ್ಲಿ ಪರೀಕ್ಷಾ ಇಲಾಖೆಯ ವೆಬ್ಸೈಟ್ನಲ್ಲಿ ನೋಡಬಹುದು.