ಬೆಂಗಳೂರು: ಬಾನಂಗಳದಲ್ಲಿ ಕಂಕಣ ಸೂರ್ಯಗ್ರಹಣಕ್ಕೆ ಸಜ್ಜಾಗಿದೆ!
ಭಾನುವಾರ ಬೆಳಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಸೂರ್ಯಗ್ರಹಣ ಗೋಚರಿಸಲಿದ್ದು, ಇದು ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಕೆಲವ ಭಾಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಪಾರ್ಶ್ವವಾಗಿ ಗೋಚರಿಸಿಲಿದೆ.
ಸೂರ್ಯಗ್ರಹಣ ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿಯಾಗಿದ್ದು, ಗ್ರಹಣ ವೀಕ್ಷಣೆಗೆ ಬಳಸುವ ಕನ್ನಡಕ ಅಥವಾ ಇತರೆ ಮುನ್ನೆಚ್ಚರಿಕಾ ಕ್ರಮದೊಂದಿಗೆ ವೀಕ್ಷಣೆ ಮಾಡಬಹುದಾಗಿದೆ. ಆಸಕ್ತರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ವೆಬ್ಸೈಟ್, ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನಲ್ನಲ್ಲಿ ಸೂರ್ಯ ಗ್ರಹಣದ ವಿಡಿಯೋವನ್ನು ವೀಕ್ಷಿಸಬಹುದಾಗಿದೆ.