ಮಂಗಳೂರು: ಇಂದು ರಾತ್ರಿ ಆಕಾಶದಲ್ಲಿ ನೀವು ನೋಡುವ ಚಂದ್ರನ ವಿಶೇಷತೆ ಏನು ಬಲ್ಲಿರಾ? ಇಂದಿನ ಹುಣ್ಣಿಮೆ ಚಂದ್ರನನ್ನು ‘ಸೂಪರ್ ಫ್ಲವರ್ ಮೂನ್’ ಎಂದು ಕರೆಯುತ್ತಾರೆ. ಅದಷ್ಟೇ ಅಲ್ಲ, ಇಂದಿನ ಹುಣ್ಣಿಮೆ ಚಂದ್ರನನ್ನು ಕಾರ್ನ್ ಪ್ಲಾಂಟಿಂಗ್ ಮೂನ್, ಮಿಲ್ಕ್ ಮೂನ್, ವೈಶಾಖ ಚಂದ್ರ ಎಂದೂ ಕರೆಯುತ್ತಾರೆ.
ಇದನ್ನು ಫ್ಲವರ್ ಮೂನ್ ಎಂದು ಕರೆಯಲೂ ಕಾರಣವಿದೆ. ಉತ್ತರಾರ್ಧ ಗೋಳದಲ್ಲಿ ಈಗ ಹೂವುಗಳು ಭಾರೀ ಪ್ರಮಾಣದಲ್ಲಿ ಅರಳುವ ಸಮಯ. ಹಾಗಾಗಿ ಅದಕ್ಕೆ ಈ ಹೆಸರು ಬಂದಿದೆ.
ಈ ವರ್ಷದ ಕೊನೆಯ ಸೂಪರ್ ಚಂದ್ರ ಇದಾಗಲಿದೆ.
ಚಂದ್ರನು ತನ್ನ ಕಕ್ಷೆಯಯಲ್ಲಿ ಭೂಮಿಗೆ ಅತ್ಯಂತ ಸಮೀಪವಾಗಿ ಬಂದಾಗ ಅಂತಹ ಹುಣ್ಣಿಮೆಯನ್ನು ಸೂಪರ್ ಮೂನ್ ಎಂದು ಕರೆಯುವುದು ರೂಢಿ. ಇಂತಹ ದಿನಗಳಲ್ಲಿ ಚಂದ್ರನು ಹೆಚ್ಚು ಪ್ರಕಾಶಮಾನವಾಗಿ ಕಂಡುಬರುತ್ತಾನೆ. ಈ ವರ್ಷ ಸುಮಾರು ಮೂರರಿಂದ ನಾಲ್ಕು ಸೂಪರ್ ಮೂನ್ಗಳು ಸಂಭವಿಸಿವೆ. ಇಂದಿನದು ಈ ವರ್ಷದ ಕೊನೆಯ ಸೂಪರ್ಮೂನ್.