Saturday, August 13, 2022

Latest Posts

ಇಂದು ದುಬೈಯಿಂದ ಎರಡನೇ ಏರ್‌ಲಿಫ್ಟ್: ಕರಾವಳಿಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ವಿಮಾನ!

ಮಂಗಳೂರು: ದುಬೈಯಿಂದ ಕನ್ನಡಿಗರನ್ನು ಹೊತ್ತ ಮತ್ತೊಂದು ವಿಮಾನ ಮೇ18ರಂದು ಮಂಗಳೂರಿಗೆ ಬಂದಿಳಿಯುವ ಸುದ್ದಿ ನಗರದ ಜನತೆಯಲ್ಲಿ ಆತಂಕ ಉಂಟುಮಾಡಿದೆ.
ದುಬೈಯಿಂದ ಮೇ 12ರಂದು ಬಂದ ವಿಮಾನ ಪ್ರಯಾಣಿಕರೊಂದಿಗೆ ಕೊರೋನಾ ಸೋಂಕನ್ನು ಹೊತ್ತು ಬಂದಿದ್ದರೆ, ಇದೀಗ ಮತ್ತೊಂದು ವಿಮಾನ ಕೂಡ ಕೊರೋನಾ ಸೋಂಕಿತರನ್ನು ಹೊತ್ತು ಬರಲಿದೆಯೇ ಎಂಬ ಆತಂಕ ಜನರನ್ನು ಕಾಡಲಾರಂಭಿಸಿದೆ.
ಮೊದಲ ವಿಮಾನ 179 ಮಂದಿಯನ್ನು ಹೊತ್ತು ಬಂದಿತ್ತು. ಬಂದವರ ಪೈಕಿ ಕರಾವಳಿಯ 21 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿತ್ತು. ಇದೀಗ ಎರಡನೇ ವಿಮಾನ ಬರಲಿದೆ ಎಂಬ ಸುದ್ದಿ ಜನತೆಯ ನಿದ್ದೆಗೆಡಿಸಿದೆ.
ಸದ್ಯದಲ್ಲಿಯೇ ಕರ್ನಾಟಕಕ್ಕೆ ಒಟ್ಟು  14 ದೇಶಗಳಿಂದ 17 ವಿಮಾನಗಳು ಬರುವ ಸಾಧ್ಯತೆಯಿದೆ. ಈ ಪೈಕಿ ಒಂದು ವಿಮಾನ ಸೋಮವಾರ ಮಂಗಳೂರಿಗೆ ಬರಲಿದೆ. ಅಮೆರಿಕಾದಿಂದ 3, ಕೆನಡಾದಿಂದ 2, ಸೌದಿ ಅರೆಬಿಯಾ, ಫಿಲಿಫೈನ್ಸ್, ಯುಎಇ, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಮಲೇಷಿಯಾ, ಜರ್ಮನಿ, ಒಮನ್, ಕತಾರ್‌ನಿಂದ ತಲಾ ಒಂದೊಂದು ವಿಮಾನಗಳು ಸದ್ಯದಲ್ಲಿಯೇ ಕರ್ನಾಟದಲ್ಲಿ ಲ್ಯಾಂಡ್ ಆಗಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss