ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಮಾತನಾಡಲಿದ್ದಾರೆ: ಪ್ರಧಾನಿ ಮೋದಿ

0
76

ಹೊಸದಿಲ್ಲಿ: ದೇಶದಲ್ಲಿ ಮಾರಣ ಹೋಮ ನಡೆಸಲು ಮುಂದಾಗಿರುವ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದೆ.

ಕೊರೋನಾ ಸೋಂಕಿನ ಪ್ರಕರಣಗಳು ಭಾರತಕ್ಕೆ ಬಂದು ಮೂರು ವಾರಗಳಾಗಿವೆ. ಇನ್ನು ಒಂದು ವಾರ ಭಾರತಕ್ಕೆ ಅತ್ಯಂತ ಮಹತ್ವವಾಗಿದೆ. ಕೊರೋನಾ ತಡೆಗಟ್ಟಲು ಇದಾಗಲೇ ಪ್ರಧಾನಿ ಮೋದಿ ಮಾ.22 ರಂದು ಜನತಾ ಕರ್ಫ್ಯೂ ಘೋಷಿಸಿದ್ದರು. ಅಂದು ಕೋವಿಡ್-19 ಕುರಿತಾಗಿ ಮಾಹಿತಿಗಳನ್ನು ನೀಡಿದ ಪ್ರಧಾನಿ ಮೋದಿ ಇಂದು (ಮಾ.24) ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಅವರೇ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, ಕೊವಿಡ್-19 ರ ಭೀತಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಬಗ್ಗೆ ಮಾ.24ರಂದು ರಾತ್ರಿ 8ಗಂಟೆಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here