Wednesday, June 29, 2022

Latest Posts

ಇಂದು ಭಾರತದ ಮೊದಲ ಏರ್ ಲಿಫ್ಟ್: 2500ಕ್ಕೂ ಅಧಿಕ ಭಾರತೀಯರು ಘರ್ ವಾಪಸಿ

ಹೊಸದಿಲ್ಲಿ: ವಿಶ್ವದಾದ್ಯಂತ ಕೊರೋನಾ ಸಂಕಷ್ಟದಲ್ಲಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಮಹತ್ವದ ಏರ್ ಲಿಫ್ಟ್ ಇಂದು ಚಾಲನೆಗೊಳ್ಳಲಿದೆ.

ಕೊರೋನಾ ಪಿಡುಗಿನ ವೇಳೆಯಲ್ಲಿ ಭಾರತ ಕೈಕೊಂಡಿರುವ ಅತ್ಯಂತ ಮಹತ್ವದ ನಿರ್ಣಯಗಳಲ್ಲಿ ಈ ಏರ್ ಲಿಫ್ಟ್ ಕೂಡ ಸೇರ್ಪಡೆಯಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಮರಳಿ ತವರೂರಿಗೆ ಕರೆತರುವ ವಿಶ್ವದ ಅತಿದೊಡ್ಡ ಏರ್ ಲಿಫ್ಟ್ ಇದಾಗಿದೆ.


2500 ಮಂದಿ ಮರಳಿ ತವರಿಗೆ:
ಇಂದು ದೇಶದ ವಿವಿಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಭಾರತಕ್ಕೆ 2500ಕ್ಕೂ ಅಧಿಕ ಮಂದಿ ಬಂದಿಳಿಯಲಿದ್ದಾರೆ. ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿ ವಿಮಾನ ನಿಲ್ದಾಣ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ವಿಮಾನ ಗಳು ಹೊರಡಲಿದೆ.

ಕಠಿಣ ಕ್ರಮ: ವಿದೇಶಗಳಿಂದ ಭಾರತಕ್ಕೆ ಬರಲಿರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ/ಐಜಿಎಂ ಪರೀಕ್ಷೆಗಳು ಮಾಡಲಾಗುತ್ತದೆ. ಜ್ವರದ ಲಕ್ಷಣ ಇಲ್ಲದಿದ್ದರು ಎಲ್ಲಾ ಪ್ರಯಾಣಿಕರಿಗೂ 14 ದಿನಗಳ ಕ್ವಾರಂಟೈನ್ ನಲ್ಲಿ ಒಳಪಡಿಸಿ, ಅದರ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕೆಂಬ ಒಪ್ಪಂದವಾಗಿದೆ.

ವಿದೇಶಗಳಲ್ಲಿ ಸಿಲುಕಿರುವ 14800 ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲು ಭಾರತ ಸಂಪೂರ್ಣ ಸಿದ್ದತೆ ನಡೆಸಿದ್ದು, ಮೇ.7ರಿಂದ ಮೇ.14ರವರೆಗು 64 ವಿಮಾನಗಳಲ್ಲಿ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಲಂಡನ್, ಸಿಂಗಪೂರ್, ಸ್ಯಾನ್ ಫ್ರಾನ್ಸಿಸ್ಕೊ, ಮಲೈಷಿಯಾ,ಚಿಕಾಗೋ, ಬಾಂಗ್ಲಾದೇಶ, ಫಿಲಿಫಿನ್ಸ್, ಸೌದಿ ಅರೇಬಿಯಾ, ಕತಾರ್, ಬಹ್ರೇನ್, ಕುವೈತ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಭಾರತ ವಾಪಸ್ ಕರೆತರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss