Tuesday, July 5, 2022

Latest Posts

ಇಂದು ರಾಜ್ಯದಲ್ಲಿ ಮತ್ತೆ 10,947 ಹೊಸ ಕೇಸ್: ನಿಲ್ಲದ ಕೊರೋನಾ ಅಟ್ಟಹಾಸ

ಬೆಂಗಳೂರು: ಇಂದು ರಾಜ್ಯಾದ್ಯಂತ 10,947 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆಯಾಗಿದೆ.
ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರದಲ್ಲಿ 5000 ಜನರು ಸೇರಿದಂತೆ ರಾಜ್ಯಾದ್ಯಂತ 10,947 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆಯಾಗಿದೆ. ಇಂದು 9,832 ಸೋಂಕಿತರು ಗುಣಮುಖರಾಗಿದ್ದು , ಒಟ್ಟು 5,42,906 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ 1,16,153 ಸಕ್ರೀಯ ಸೋಂಕಿತರಾಗಿರುವುದಾಗಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ 55 ಜನರು ಸೇರಿದಂತೆ 113 ಜನರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 9,574ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss